ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ನಾಗರಪಂಚಮಿ ಅಂಗವಾಗಿ ಎಲ್ಲೆಡೆ ಮೂಲ ನಾಗಬನ ಮತ್ತು ಪರಂಪರೆಯ ನಾಗಬನದಲ್ಲಿ ತನು, ತಂಬಿಲ ಸೇವೆ ಜರುಗಿತು.
ನಾಗರಡಿ:
Advertisement. Scroll to continue reading.


ಬಾರಕೂರು ಬಂಡೀಮಠದಲ್ಲಿರುವ ಪುರಾತನವಾದ ಶ್ರೀ ಕ್ಷೇತ್ರ ನಾಗರಡಿಯಲ್ಲಿ ನೂರಾರು ಭಕ್ತಾಧಿಗಳಿಂದ ನಾನಾ ಸೇವೆ ಜರುಗಿತು.
ಆಚಾರ್ ಬೆಟ್ಟು :

ಕನ್ನಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ಇರುವ ಆಚಾರ್ ಬೆಟ್ಟುವಿನ ನಾಗಬನದಲ್ಲಿ ನಾಡಿನ ಹಲವಾರು ಭಾಗದಿಂದ ವಿಶ್ವಬ್ರಾಹ್ಮಣರ ಮೂಲ ನಾಗಬನದಲ್ಲಿ ನಾಗರಪಂಚಮಿ ಅಂಗವಾಗಿ ವಿಶೇಷ ಪೂಜೆ ಜರುಗಿತು.
ಧರ್ಮಶಾಲೆ :

ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದ ನಾಗ ಬನದಲ್ಲಿ ವಿಶೇಷ ಪೂಜೆ ಜರುಗಿತು.
ಬಂಡೀಮಠ :

ಬಾರಕೂರು ಬಂಡೀಮಠ ತಮ್ಮಯ್ಯ ಆಚಾರ್ಯ ಕುಟುಂಬಿಕರಿಂದ ಮೂಲ ನಾಗ ಬನದಲ್ಲಿ ನಾಗ ಪೂಜೆ ಜರುಗಿತು.
Advertisement. Scroll to continue reading.
