ಜನವರಿಯಲ್ಲಿ ಕೊರೊನಾ ಲಸಿಕೆ ಅಭಿಯಾನ ಆರಂಭದಿಂದ ಇದುವರೆಗೆ ಭಾರತ 75 ಕೋಟಿ ಡೋಸ್ ಮೈಲಿಗಲ್ಲನ್ನ ದಾಟಿದ್ದು, ವಿಶ್ವ ಆರೋಗ್ಯ ಸಂಸ್ಥೆ (WHO) ಸೋಮವಾರ ಭಾರತವನ್ನು ಅಭಿನಂದಿಸಿದೆ.
ಮೊದಲ 100 ಮಿಲಿಯನ್ ಡೋಸ್ʼಗಳನ್ನು ನೀಡಲು 85 ದಿನಗಳು ತೆಗೆದುಕೊಂಡರೂ, ಭಾರತವು ಕೇವಲ 13 ದಿನಗಳಲ್ಲಿ 650 ಮಿಲಿಯನ್ʼನಿಂದ 750 ಮಿಲಿಯನ್ ಡೋಸ್ʼಗಳನ್ನು ತಲುಪಿದೆ’ ಎಂದು ಡಬ್ಲ್ಯೂಹೆಚ್‌ಒನ ಪ್ರಾದೇಶಿಕ ನಿರ್ದೇಶಕ ಡಾ. ಪೂನಮ್ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.
ಸಿಕ್ಕಿಂ, ಹಿಮಾಚಲ ಪ್ರದೇಶ, ಗೋವಾ, ದಾದ್ರಾ ಮತ್ತು ನಗರ ಹವೇಲಿ, ಲಡಾಖ್ ಮತ್ತು ಲಕ್ಷದ್ವೀಪ ಎಂಬ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಲ್ಲಾ ವಯಸ್ಕ ಜನರು ಕನಿಷ್ಠ ಒಂದು ಡೋಸ್ ಲಸಿಕೆಯನ್ನ ಪಡೆದಿದ್ದಾರೆ.

ಅಂದ್ಹಾಗೆ, ಈ ವಿಚಾರವನ್ಮು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ, ‘ದೇಶದ ಲಸಿಕೆ ಅಭಿಯಾನವು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ‘ಸಬ್ ಕಾ ಸಾಥ್, ಸಬ್ ಕಾ ಪ್ರಯಾಗ್ ಎಂಬ ಮಂತ್ರದೊಂದಿಗೆ ಹೊಸ ಆಯಾಮಗಳನ್ನು ಸೃಷ್ಟಿಸುತ್ತಲೇ ಇದೆ’ ಎಂದಿದ್ದಾರೆ.
