ಚಂದನವನ : ಈಗಾಗಲೇ ಸಾಲು ಸಾಲುಚಿತ್ರಗಳನ್ನು ಘೋಷಿಸಿರುವ ಹೊಂಬಾಳೆ ಫಿಲಂಸ್ ಇದೀಗ ಮತ್ತೊಂದು ಸಿನಿಮಾ ಘೋಷಿಸಿದೆ. ತಮ್ಮ ಬ್ಯಾನರ್ ಅಡಿಯಲ್ಲಿ ತಯಾರಾಗಲಿರುವ 12ನೇ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆ ಮಾಡಿದೆ. ಅದೂ ನವರಸ ನಾಯಕ ಜಗ್ಗೇಶ್ ಜೊತೆ ಹೊಸ ಸಿನಿಮಾ ಮಾಡುವ ಬಗ್ಗೆ ಅನೌನ್ಸ್ ಮಾಡಿದ್ದು,. ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಹೆಸರೂ ಇಂಪ್ರೆಸಿಂಗ್ ಆಗಿದೆ. ಅದೇ ‘ರಾಘವೇಂದ್ರ ಸ್ಟೋರ್ಸ್’.
ಅಂದಹಾಗೆ ನವೆಂಬರ್ 22 ರಿಂದ ಚಿತ್ರೀಕರಣ ಆರಂಭಗೊಳ್ಳಲಿದೆ. ಈ ಬಗ್ಗೆ ಹೊಂಬಾಳೆ ಫಿಲಂಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ನಟ ಜಗ್ಗೇಶ್ ಕೂಡ ಹಂಚಿಕೊಂಡಿದ್ದು, ”ನಗಬೇಕು ನಗಿಸಬೇಕು ಇದೆ ನನ್ನ ಧರ್ಮ..ಫುಲ್‌ಮೀಲ್ಸ್ ಹಬ್ಬದೂಟ” ಎಂದು ಸಂತಸ ಹಂಚಿಕೊಂಡಿದ್ದಾರೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, HombaaleFilms, jaggesh, Santhosh Anandram, Vijay kiragandooru

Click to comment