ವಾಷಿಂಗ್ಟನ್ : ಮೂರು ದಿನಗಳ ಯುಎಸ್ ಎ ಪ್ರವಾಸ ಹೊರಟಿರುವ ಪ್ರಧಾನಿ ಮೋದಿ ಇಂದು ವಾಷಿಂಗ್ಟನ್ ತಲುಪಿದ್ದು, ಅವರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಸಣ್ಣ ಮಳೆ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಾಯಿತು. ಭಾರತೀಯ ರಾಯಭಾರಿ ತರಂಜೀತ್ ಸಿಂಗ್ ಸಂಧು ಕೂಡ ಈ ಸಂದರ್ಭ ಹಾಜರಿದ್ದರು.
ವಿಮಾನ ನಿಲ್ದಾಣದ ಹೊರಗೆ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದಿರುವ ಜನರ ಗುಂಪು ಮಳೆಯ ನಡುವೆ ಪ್ರಧಾನಿ ಮೋದಿ ವಾಷಿಂಗ್ಟನ್ ಡಿಸಿಗೆ ಬರುವಿಕೆಗೆ ಕಾದಿತ್ತು. ಪ್ರೀತಿಯಿಂದ ಅವರನ್ನು ಸ್ವಾಗತಿಸಿದರು. ಅವರತ್ತ ಕೈ ಬೀಸಿದ ಮೋದಿ,ಹಸ್ತಲಾಘವ ಮಾಡಿದರು.
ಈ ಬಗ್ಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ಸಮುದಾಯಕ್ಕೆ ಅವರ ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ವಾಯುನೆಲೆಯ ನಂತರ ಪ್ರಧಾನಿಯನ್ನು ವಾಷಿಂಗ್ಟನ್ ಹೋಟೆಲ್ ಗೆ ಕರೆದೊಯ್ಯಲಾಯಿತು. ಅಲ್ಲಿಯೂ ಅವರನ್ನು ಭಾರತೀಯ ಸಮುದಾಯ ಹಾರ್ದಿಕವಾಗಿ ಸ್ವಾಗತಿಸಿತು.
Advertisement. Scroll to continue reading.

In this article:Diksoochi news, diksoochi Tv, diksoochi udupi, modi in USA, PM Modi

Click to comment