ವಾಷಿಂಗ್ಟನ್ : ಜಾಗತಿಕವಾಗಿ ವಾಟ್ಸಾಪ್, ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ ಸೇವೆಯಲ್ಲಿ ಉಂಟಾದ ವ್ಯತ್ಯಯಕ್ಕೆ ಸಿಇಒ ಮಾರ್ಕ್ ಜುಗರ್ ಬರ್ಗ್ ಕ್ಷಮೆಯಾಚಿಸಿದ್ದಾರೆ. ಫೇಸ್ ಬುಕ್ ಒಡೆತನದ ಮೂರು ಅಪ್ಲಿಕೇಷನ್ ಗಳು ಸದ್ಯ ಆನ್ ಲೈನ್ ಗೆ ಬಂದಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದ್ದಾರೆ.
ಭಾರತೀಯ ಕಾಲಮಾನದಂತೆ ಅಕ್ಟೋಬರ್ 04ರಂದು ರಾತ್ರಿ 9 ಗಂಟೆಯ ನಂತರ ಈ ಮೂರು ಅಪ್ಲಿಕೇಷನ್ಸ್ ಸ್ಥಗಿತಗೊಂಡಿದ್ದವು. ಆಂಡ್ರಾಯ್ಡ್ , ಐಒಎಸ್ ಹಾಗೂ ವೆಬ್ ಅಪ್ಲಿಕೇಷನ್ಸ್ ಎಲ್ಲೆಡೆ ಸೇವೆ ಬಂದ್ ಆಗಿತ್ತು. ವಾಟ್ಸಾಪ್ ಸಂದೇಶಗಳು ಹೋಗುತ್ತಿರಲಿಲ್ಲ, ಹೊಸ ಸಂದೇಶ ಬರುತ್ತಿರಲಿಲ್ಲ, ಸ್ಟೇಟಸ್ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ, ಇನ್ನೊಂದೆಡೆ ಇನ್ಸ್ಟಾಗ್ರಾಂ ಹಾಗೂ ಫೇಸ್ಬುಕ್ನಲ್ಲಿ ಯಾವುದೇ ಫೀಡ್ಗಳು ಬರುತ್ತಿರಲಿಲ್ಲ. ಕ್ಯಾಲಿಫೋರ್ನಿಯಾದ ಕಚೇರಿಯಲ್ಲಿರುವ ಮುಖ್ಯ ಸರ್ವರ್ ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಅಡಚಣೆ ಉಂಟಾಗಿತ್ತು.
Advertisement. Scroll to continue reading.
In this article:Diksoochi news, diksoochi Tv, diksoochi udupi, Facebook, Instagram, mark jukar barg, twitter
Click to comment