ವರದಿ : ದಿನೇಶ್ ರಾಯಪ್ಪನಮಠ
ಕೋಟ: “ಕೋಲು ಕೋಲೆನ್ನಿರೋ | ಹೂವಿನ | ಕೋಲು ಕೋಲೆನ್ನಿರೋ” ಎಂದು ಕೋಲಾಟವನ್ನೊಳಗೊಂಡ ಹೂವಿನ ಕೋಲು ದೇಶದ ಜನರಿಗೆ ಹಿತವನ್ನು ಮಕ್ಕಳ ಮೂಲಕ ಮನೆ ಮನೆಗಳಿಗೆ ಹೋಗಿ ಹಾರೈಸುವ ಕಲೆ ಈ ಹೂವಿನ ಕೋಲು. ಇದನ್ನು ಹಲವಾರು ವರ್ಷಗಳಿಂದ ಅಭಿಯಾನದ ರೂಪದಲ್ಲಿ ದೇಶದ ತುಂಬೆಲ್ಲಾ ಪಸರಿಸುವ ಯಶಸ್ವಿ ಕಲಾವೃಂದದ ಈ ಕಲಾ ಕೊಡುಗೆ ನಿಜಕ್ಕೂ ಸ್ತುತ್ಯರ್ಹ. ದೇಶಕ್ಕೆ ಶುಭ ಹಾರೈಸುವ ಈ ಕಾರ್ಯಕ್ರಮಕ್ಕೆ ದೇವರ ಶ್ರೀ ರಕ್ಷೆ ಇರಲಿ ಎಂದು ಆನೆಗುಡ್ಡೆ ದೇಗುಲದ ಪ್ರಧಾನ ಅರ್ಚಕ ನಾಗರಾಜ ಉಪಾಧ್ಯ ಹಾರೈಕೆಯ ನುಡಿಗಳನ್ನಾಡಿದರು.
ಕೊೈಕೂರು ಸೀತಾರಾಮ ಶೆಟ್ಟಿ ನಿರ್ದೇಶನದ ಯಶಸ್ವಿ ಮಕ್ಕಳ ತಂಡದ ಹೂವಿನ ಕೋಲು ಕಾರ್ಯಕ್ರಮ ಪ್ರಥಮ ದೇವರ ಸೇವೆಯನ್ನು ಆನೆಗುಡ್ಡೆ ವಿನಾಯಕನ ಸನ್ನಿಧಿಯಲ್ಲಿ ಉದ್ಘಾಟನಾ ರೂಪದಲ್ಲಿ ಆರಂಭಿಸಿ ಕೋಟ, ತೆಕ್ಕಟ್ಟೆ, ಮಲ್ಯಾಡಿ ಭಾಗದಲ್ಲಿ ಆಯ್ದ ಗೌರವಾನ್ವಿತರ ಮನೆಗಳಿಗೆ ತೆರಳಿ ಪ್ರದರ್ಶನ ನಿರ್ವಹಿಸುವುದಕ್ಕೆ ಒಟ್ಟು ಹದಿನೈದು ಪ್ರಸಂಗದ ತುಣುಕನ್ನು ಹಿಡಿದು ಹೊರಟ ತಂಡವಿದಾಗಿದೆ ಎಂದು ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಕೆ.ಪಿ. ಹೆಗಡೆ, ಗುರು ದೇವದಾಸ್ ರಾವ್ ಕೂಡ್ಲಿ, ಗುರುಗಳಾದ ಲಂಬೋದರ ಹೆಗಡೆ, ವೆಂಕಟೇಶ ವೈದ್ಯ, ಪ್ರಶಾಂತ್ ಮಲ್ಯಾಡಿ ಉಪಸ್ಥಿತರಿದ್ದರು.
