Connect with us

Hi, what are you looking for?

Diksoochi News

Uncategorized

ಟಿ20 ವಿಶ್ವಕಪ್ : ಭಾರತ ವಿರುದ್ಧ ಪಾಕಿಸ್ತಾನಕ್ಕೆ 10 ವಿಕೆಟ್ ಗಳ ಜಯ

0

T20 ವಿಶ್ವಕಪ್ 2021 ರ ಅಂಗವಾಗಿ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದೆ. ಟಾಸ್ ಗೆದ್ದು ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು. ಗುರಿ ಬೆನ್ನತ್ತಿದ ಪಾಕಿಸ್ತಾನ 17.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 152 ಗಳಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಡಕ್ ಔಟ್ ಆದರು. ಕೆಎಲ್ ರಾಹುಲ್ 8 ಎಸೆತಗಳನ್ನು ಆಡಿ 3 ರನ್ ಗಳಿಸಿ ಪೆವಿಲಿಯನ್ ಸೇರಿದರೆ, ಸೂರ್ಯಕುಮಾರ್ 11 ರನ್ ಗಳಿಸಿ ಔಟಾದರು.

32 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಕೊಹ್ಲಿ ಹಾಗೂ ರಿಷಬ್ ಪಂತ್ ಮುನ್ನಡೆಸಿದರು. ರಿಷಭ್ ಪಂತ್ 30 ಎಸೆತಗಳಲ್ಲಿ 39 ರನ್, ರವೀಂದ್ರ ಜಡೇಜಾ 12 ಎಸೆತಗಳಲ್ಲಿ 13 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಏಳು ಎಸೆತಗಳಲ್ಲಿ 11 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೊನೆಯಲ್ಲಿ ಭುವನೇಶ್ವರ್ 5 ರನ್ ಗಳಿಸಿದ್ದರಿಂದ ಶಮಿಗೆ ಸ್ಟ್ರೈಕ್ ಸಿಗಲಿಲ್ಲ. ಪಾಕಿಸ್ತಾನದ ಬೌಲರ್ಗಳಲ್ಲಿ ಶಾಹೀನ್ ಅಫ್ರಿದಿ 3 ವಿಕೆಟ್, ಹಸನ್ ಅಲಿ 2 ವಿಕೆಟ್, ಶಾದಬ್ ಖಾನ್ 1 ವಿಕೆಟ್ ಮತ್ತು ರೌಫ್ 1 ವಿಕೆಟ್ ಪಡೆದರು.

Advertisement. Scroll to continue reading.

ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 79, ಬಾಬರ್ ಅಜಾಮ್ 68 ರನ್ ಗಳಿಸಿ ಗೆಲುವು ತಂದರು.

Click to comment

Leave a Reply

Your email address will not be published. Required fields are marked *

You May Also Like

ಅರೆ ಹೌದಾ!

1 ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯ ವೇಷವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ....

ರಾಷ್ಟ್ರೀಯ

0 ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿರಿಯ ವಕೀಲ...

ಅಂತಾರಾಷ್ಟ್ರೀಯ

1 ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮರುಭೂಮಿಯ ಊರಾದ ಯುಎಇಯಲ್ಲಿ ಎಲ್ಲೆಂದರಲ್ಲಿ ನೀರು ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದಾಗಿ ಹಲವು ನಗರಗಳಿಗೆ...

ರಾಷ್ಟ್ರೀಯ

0 ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ ‘ಶುಗರ್’ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ...

ರಾಜ್ಯ

0 ಮಂಡ್ಯ: ಐಸ್ ಕ್ರೀಮ್ ಸೇವನೆ ಮಾಡಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್...

error: Content is protected !!