ಬ್ರಹ್ಮಾವರ : ಆರೋಗ್ಯ ಕೇಂದ್ರ ಕರ್ಜೆ ಹಾಗೂ ನಿಖಿಲ್ ಗೇರು ಬೀಜ ಕಾರ್ಖಾನೆ ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ NCD ವಿಭಾಗ ಮತ್ತು ಕ್ಷಯ ಘಟಕ ಬ್ರಹ್ಮಾವರ ಸಂಯೋಜನೆಯಲ್ಲಿ ಸಾರ್ವಜನಿಕರಿಗೆ ಮಧುಮೇಹ, ರಕ್ತದೊತ್ತಡ ಮತ್ತು ಕ್ಷಯರೋಗದ ತಪಾಸಣಾ ಶಿಬಿರ ಕಳತ್ತೂರು ಶ್ರೀ ಗಣೇಶ ಮಂದಿರ ಸಂತೆಕಟ್ಟೆಯಲ್ಲಿ ಜರುಗಿತು. ಶಿಬಿರವನ್ನು ಉಡುಪಿ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಪ್ರತಾಪ್ ಹೆಗಡೆ ಮತ್ತು ಕಳತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಶಿಬಿರದ ಮೂಲ ಉದ್ದೇಶದ ಕುರಿತಾಗಿ ಹಿರಿಯ ವೈದ್ಯ ಡಾಕ್ಟರ್ ಏರಿಕ್ ಫರ್ನಾಂಡಿಸ್ ಮಾತನಾಡಿದರು. ಬ್ರಹ್ಮಾವರ ತಾಲೂಕು ಕ್ಷಯ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಆಲಂದೂರು ಮಂಜುನಾಥ್ ಕ್ಷಯರೋಗದ ಲಕ್ಷಣ ಹರಡುವ ವಿಧಾನ ಮತ್ತು ಚಿಕಿತ್ಸೆ ಕ್ರಮದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ, ಉಷಾ ಪೂಜಾರಿ, ನಿಖಿಲ್ ಮರ್ಕಂಟೈಲ್ ಕಂಪನಿಯ ಸಿಇಓ, ಎನ್ ಸಿ ಡಿ ವಿಭಾಗದ ಪ್ರತಿಭಾ, ಮಮತಾ, ದೆನ್ಸಿಲ, ಎಲಿದಾ ಮತ್ತಿತರರು ಉಪಸ್ಥಿತರಿದ್ದರು