ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(46) ವಿಧಿವಶರಾಗಿದ್ದಾರೆ. ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಪುನೀತ್ ರಾಜ್ ಕುಮಾರ್ ಕರುನಾಡ ಕಣ್ಮಣಿಯಾಗಿದ್ದರು. ಬೆಟ್ಟದ ಹೂವು ಚಿತ್ರದ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿ ಒಲಿದಿತ್ತು.
ಬಾಲನಟನಾಗಿ : ಚಲಿಸುವ ಮೋಡಗಳು, ಭಾಗ್ಯವಂತ, ಎರಡು ನಕ್ಷತ್ರಗಳು ಚಿತ್ರಗಳಲ್ಲಿ ಅಭಿನಯ ಪ್ರತಿಭೆ ಮೆರೆದಿದ್ದರು.
ಅಪ್ಪು ಚಿತ್ರದ ಮೂಲಕ ನಾಯಕನಾಗಿ ನಟಿಸಿದ ಪುನೀತ್, ವೀರ ಕನ್ನಡಿಗ, ಮೌರ್ಯ, ಆಕಾಶ್, ಅರಸು, ವಂಶಿ, ರಾಮ್, ಜಾಕಿ, ಹುಡುಗ್ರು, ರಾಜ್ ಕುಮಾರ, ಯುವರತ್ನ ಮೊದಲಾದ ಯಶಸ್ವೀ ಚಿತ್ರಗಳನ್ನು ನೀಡಿದ್ದಾರೆ.
Advertisement. Scroll to continue reading.
ಗಾಯಕನಾಗಿಯೂ ಅಪ್ಪು ಯಶಸ್ಸು ಕಂಡವರು. ನಿರೂಪಕನಾಗಿಯೂ ಕನ್ನಡದ ಕೋಟ್ಯಧಿಪತಿ, ಫ್ಯಾಮಿಲಿ ಪವರ್ ಮೂಲಕ ಜನಮನ ಗೆದ್ದಿದ್ದಾರೆ.