ಬೆಂಗಳೂರು : ಯುವಕರ ಕಣ್ಮಣಿಯಾಗಿದ್ದ ಪುನೀತ್ ರಾಜ್ ಕುಮಾರ್ ಸಣ್ಣ ವಯಸ್ಸಿನಲ್ಲೇ ಸಾಧನೆ ಮಾಡಿದ್ದರು. ಕಲಾರಂಗಕ್ಕೆ ದೊಡ್ಡ ಅಘಾತ, ನಷ್ಟ. ಒಬ್ಬ ನಾಯಕತ್ವ ಇರುವ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ರಾಜ್ ಕುಮಾರ್ ನಂತೆಯೇ ನಯ, ವಿನಯ ಹೊಂದಿದ್ದ ವ್ಯಕ್ತಿ ಎಂದು ಸಿಎಂ ಹೇಳಿದರು. ಇನ್ನು ಬಹಳ ಭವಿಷ್ಯವಿದ್ದ ವ್ಯಕ್ತಿ ಪುನೀತ್. ಕರ್ನಾಟಕದ ಮೇರು ನಟ ನಮ್ಮನ್ನು ಬಿಟ್ಟು ಹೋದಾಗ ದುಃಖವಾಗುತ್ತದೆ. ಆದರೆ, ನಾವು ಶಾಂತಿ ಕಾಪಾಡಬೇಕು. ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಬೇಕು. ಸಾಯಂಕಾಲ ಕಂಠೀರವ ಸ್ಟೇಡಿಯಂ ನಲ್ಲಿ ಅವರ ದರ್ಶನ ನಡೆಯಲಿದೆ. ಸರ್ಕಾರಿ ಗೌರವದೊಂದಿಗೆ ಅವರ ಅಂತ್ಯಕ್ರಿಯೆ ಮಾಡಲಾಗುವುದು. ಕುಟುಂಬದ ನಿರ್ಧಾರದ ಮೇಲೆ ಅಂತ್ಯಕ್ರಿಯೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದರು.