ಶಿವಮೊಗ್ಗ: ಬುಲೆರೋವೊಂದು ನಿಯಂತ್ರಣ ತಪ್ಪಿ ಕಾರ್ಮಿಕ ಹಾಗೂ ಬೈಕ್ ಸವಾರನಿಗೆ ಡಿಕ್ಕಿಯಾದ ಪರಿಣಾಮ, ಕಾರ್ಮಿಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಮುದ್ದಿನಕೊಪ್ಪ ಕ್ರಾಸ್ ಬಳಿ ನಡೆದಿದೆ. ಬೈಕ್ ಸವಾರ ಹಾಗೂ ಬುಲೆರೋ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಮುದ್ದಿನಕೊಪ್ಪ ಬಳಿ ಬುಲೆರೋವೊಂದು ಚಾಲಕನ ನಿಯಂತ್ರಣ ತಪ್ಪಿ, ಹೊಲದಲ್ಲಿ ಬೈಕ್ ಗೆ ಡಿಕ್ಕಿಯಾಗಿದೆ. ಇದರಿಂದ ಬೈಕ್ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ.
ಇನ್ನೂ ಇದೇ ಬುಲೆರೋವಾಹನ ರಸ್ತೆಯ ಪಕ್ಕದಲ್ಲಿನ ಹೊಲಕ್ಕೆ ನುಗ್ಗಿದ್ದರಿಂದಾಗಿ, ಹೊಲದಲ್ಲಿ ಏತ ನೀರಾವರಿ ಕೆಲಸ ಮಾಡುತ್ತಿದ್ದಂತ ಕಾರ್ಮಿಕ ಚಂದ್ರಶೇಖರ್ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.
ಬುಲೆರೋವಾಹನ ಚಾಲಕ ಹಾಗೂ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಘಟನೆಗೆ ಬುಲೆರೋ ವಾಹನ ಸವಾರ ಅತಿ ವೇಗದ ಚಾಲನೆಯೇ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.