ಶಿವಮೊಗ್ಗ : ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಭಾರೀ ಅನಾಹತವೊಂದು ತಪ್ಪಿದೆ. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯಾತಪ್ಪಿ ಬಿದ್ದ ಮಹಿಳೆಯನ್ನು ರೈಲ್ವೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಪ್ರಾಣದ ಹಂಗು ತೊರೆದು ಪೊಲೀಸರು ಮಹಿಳೆಯ ರಕ್ಷಣೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ವೀಡಿಯೋ ವೈರಲ್ ಆಗಿದೆ.
ಮಂಗಳವಾರ ಶಿವಮೊಗ್ಗ ನಿಲ್ದಾಣಕ್ಕೆ ಬೆಳಿಗ್ಗೆ 6.55ಕ್ಕೆ ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಆಗಮಿಸಿತ್ತು. ಈ ರೈಲು ನಿಲ್ದಾಣದಲ್ಲಿ ನಿಂತು ಬೆಂಗಳೂರಿನತ್ತ 7.05ಕ್ಕೆ ಹೊರಟಿದೆ. ಸಂಬಂಧಿಕರನ್ನು ರೈಲಿಗೆ ಹತ್ತಿಸಿ ಇಳಿಯುತ್ತಿದ್ದಂತ ಸಂದರ್ಭದಲ್ಲಿ ಮಹಿಳೆಯೊಬ್ಬರು ಇಳಿದಿದ್ದಾರೆ.
ಫ್ಲಾಟ್ ಫಾಂನಲ್ಲಿ ಇಳಿದಂತ ಮಹಿಳೆಯು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ರೈಲು ಗಾಲಿಗೆ ಸಿಕ್ಕೇ ಬಿಟ್ಟರು ಎನ್ನುವ ಸಂದರ್ಭದಲ್ಲೇ ರೈಲ್ವೆ ಪೊಲೀಸ್ ಇಲಾಖೆಯ ಅಣ್ಣಪ್ಪ, ಸಂತೋಷ್ ಕುಮಾರ್ ಬಿ ಎಸ್ ಹಾಗೂ ಆರ್ ಪಿ ಎಫ್ ಕಾನ್ಸ್ ಟೇಬಲ್ ಜಗದೀಶ್ ರಕ್ಷಣೆ ಮಾಡಿದ್ದಾರೆ. ಪ್ರಾಣದ ಹಂಗು ತೊರೆದು ರಕ್ಷಿಸಿರುವ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.