Connect with us

Hi, what are you looking for?

ರಾಜ್ಯ

ಅನಿರೀಕ್ಷಿತ ಮಳೆ: ಬೆಳೆ ಹಾನಿ ಸಮೀಕ್ಷಾ ವರದಿ ನೀಡಲು ಸರ್ಕಾರಕ್ಕೆ ಸೂಚಿಸಲಾಗಿದೆ : ಸಚಿವೆ ಶೋಭಾ ಕರಂದ್ಲಾಜೆ

ವರದಿ : ದಿನೇಶ್ ರಾಯಪ್ಪನಮಠ

ಉಡುಪಿ: ಅನಿರೀಕ್ಷಿತ ರೀತಿಯಲ್ಲಿ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿದು ವ್ಯಾಪಕ ಬೆಳೆಹಾನಿಯಾಗಿದೆ. ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ಮಾಡಿ ಕೇಂದ್ರಕ್ಕೆ ವರದಿ ಸಲ್ಲಿಸಲು ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಶುಕ್ರವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೂ ಬೆಳೆ ನಾಶದ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚನೆ ನೀಡಲಾಗಿದೆ.

ದೇಶಾದ್ಯಂತ ಮಳೆಯ ಪ್ರಮಾಣ ಹೆಚ್ಚಿದೆ. ನಿರೀಕ್ಷೆ ಮಾಡದ ರೀತಿಯಲ್ಲಿ ಎಲ್ಲ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಭತ್ತ ರಾಗಿ ಜೋಳ ಅಪಾರ ಪ್ರಮಾಣದಲ್ಲಿ ನಾಶವಾಗುತ್ತಿದೆ. ಭತ್ತ ಒಣಗಿಸಲಾಗದ ಪರಿಸ್ಥಿತಿ ಎದುರಾಗಿದೆ. ಅಗ್ರಿಕಲ್ಚರ್ ಇನ್ಪ್ರಾಸ್ಟ್ರಕ್ಚರ್  ಫಂಡ್ ನಿಂದ ಡ್ರೈಯರ್ ಖರೀದಿಗೆ ಕೇಂದ್ರ ವ್ಯವಸ್ಥೆ ಮಾಡಲಿದೆ. ವೇರ್ ಹೌಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹೊಸ ತಂತ್ರಜ್ಞಾನ ಬಳಸಿಕೊಳ್ಳಲು ರಾಜ್ಯ ಸರಕಾರಕ್ಕೆ ಸೂಚನೆ ಕೊಡಲಾಗಿದೆ ಎಂದರು.

ಬಿಟ್ ಕಾಯಿನ್ ದುರ್ಬಳಕೆಯಾಗ ಬಾರದು:

ಬಿಟ್ ಕಾಯಿನ್ ಬಗ್ಗೆ ಎಲ್ಲ ರಾಷ್ಟ್ರಗಳು ಯೋಚಿಸಬೇಕಾಗಿದೆ. ಬಿಟ್ ಕಾಯಿನ್ ನ ಹಣ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಮನಿ ಟ್ರಾಫಿಕಿಂಗ್ ಮತ್ತು ಭಯೋತ್ಪಾದನೆಗೆ ಹಣ ಬಳಕೆಯಾಗದಂತೆ ನೋಡಿಕೊಳ್ಳಬೇಕು. ದೇಶದ್ರೋಹಿಗಳ ಕೈಗೆ ಬಿಟ್ ಕಾಯಿನ್ ವ್ಯವಸ್ಥೆ ಹೋಗಬಾರದು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪ್ರಧಾನಿ ಮೋದಿ ಈ ಕುರಿತು ಮಾತನಾಡಿದ್ದಾರೆ.
ಬಿಟ್ ಕಾಯಿನ್ ನಿಷೇಧ ಮಾಡಬೇಕಾ? ಅಥವಾ ಕ್ರಮಬದ್ಧಗೊಳಿಸಬೇಕಾ? ಪ್ರಧಾನಿ ಮೋದಿ ಮುಂಚೂಣಿಯಲ್ಲಿ ನಿಂತು ಎಲ್ಲ ರಾಷ್ಟ್ರಗಳ ಪ್ರಮುಖರ ಜೊತೆ ಚರ್ಚೆ ಮಾಡುತ್ತಿದ್ದಾರೆ ಎಂದರು. 

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28) ಬಂಧಿತ...

Uncategorized

ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು ಗ್ರಾಮ...

Uncategorized

ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಅನ್ನದಾನ...

Uncategorized

ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ ತುರ್ತು...

error: Content is protected !!