Connect with us

Hi, what are you looking for?

Diksoochi News

ರಾಜ್ಯ

ವಿದೇಶದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಕಡ್ಡಾಯ : ಸಚಿವ ಸುಧಾಕರ್

7

ಬೆಂಗಳೂರು: ವಿದೇಶದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಕೊರೋನಾ ನೆಗಟಿವ್ ವರದಿ ಇದ್ದರೂ ಅಂತಹವರು ಒಂದು ವಾರ ಕ್ವಾರಂಟೈನ್‍ನಲ್ಲಿರಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಕೊರೊನಾ ವೈರಸ್‍ನ ಹೊಸ ರೂಪಾಂತರಿ ತಳಿ ಒಮಿಕ್ರಾನ್ ಪತ್ತೆಯಾಗಿದೆ. ಹೀಗಾಗಿ ಏರ್ ಪೋರ್ಟ್‌ಗಳಲ್ಲಿ ಕೂಡ ಟೆಸ್ಟ್ ಮಾಡಲಾಗುತ್ತಿದೆ. ನೆಗೆಟಿವ್ ಬಂದೂ ಅವರು ಮನೆಗೆ ಹೋಗವಂತಿಲ್ಲ. ನೆಗೆಟಿವ್ ಬಂದ ಮೇಲೂ ಒಂದು ವಾರ ಕ್ವಾರಂಟೈನ್‍ನಲ್ಲಿರಬೇಕೆಂದು ಸೂಚಿಸಲಾಗುತ್ತದೆ ಎಂದರು.

ಸಮುದಾಯಕ್ಕೆ ಬಂದರೆ ಈ ವೈರಸ್ ವೇಗವಾಗಿ ಹರಡುತ್ತದೆ ಎಂಬ ಮಾಹಿತಿ ಇದೆ. ಜಿನೋಮಿಕ್ ಸಿಕ್ವೆನ್ಸಿಂಗ್ ಮಾಡಿ, ಹರಡುವ ತೀವ್ರತೆ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!