ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರುಡ್ ಸೆಟ್ ಸಂಸ್ಥೆಗಳ ರಾಷ್ಟ್ರೀಯ ಅಧ್ಯಕ್ಷರಾದ ಪರಮ ಪೂಜ್ಯ. ಡಾ ಡಿ. ವೀರೇಂದ್ರ ಹೆಗ್ಗಡೆ ಯವರ 74ನೇ ಜನ್ಮ ದಿನದ ಪ್ರಯುಕ್ತ ಅಂಗವಾಗಿ ಉಡುಪಿಯ ಬ್ರಹ್ಮಾವರದ ರುಡ್ ಸೆಟ್ ಸಂಸ್ಥೆಯ ಆಸರೆ ಸಂಘಟನೆ( ರಿ) ಇವರ ವತಿಯಿಂದ ಮಣಿಪಾಲದ ಸರಳಬೆಟ್ಟುನ ಹೊಸ ಬೆಳಕು ವ್ರದ್ದಾಶ್ರಮದಲ್ಲಿನ ನಿವಾಸಿಗಳಿಗೆ ದಿನನಿತ್ಯ ಬಳಕೆ ವಸ್ತು ಮತ್ತು ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ವಸಂತ್ ಗಿಳಿಯಾರ್, ಜನ ಸೇವಾ ಟ್ರಸ್ಟ್, ಗಿಳಿಯಾರ್ ಹಾಗೂ ರುಡ್ ಸೆಟ್ ಸಂಸ್ಥೆ , ಬ್ರಹ್ಮಾವರದ ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್, ಆಸರೆ ಸಂಘಟನೆಯ ಅಧ್ಯಕ್ಷ ರಾಘವೇಂದ್ರ ಕೋಡಿ, ಸಂಘಟನೆಯ ಗೌರವ ಅಧ್ಯಕ್ಷ ರಾಜೇಶ್ ದೇವಾಡಿಗ ಹಾಗೂ ಹೊಸಬೆಳಕು ಮುಖ್ಯಸ್ಥ ರಾದ ತನುಲ, .ಪ್ರಕಾಶ ಆಚಾರ್ಯ, ಕಿಶ್ವರ್, ರಾಜಲಕ್ಷ್ಮಿ, ಸುಮತಿ ಸುವರ್ಣ, ಕಮಲ ಅಮೀನ್, ಮಮತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾ ಪ್ರಾರ್ಥನೆ ಮಾಡಿದರು, ಕೆ.ಸಿ.ಅಮೀನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಕುಶ ಕುಮಾರ್ ವಂದಿಸಿದರು. ಸೂರಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
