ಉಳ್ಳಾಲ : ಮಂಗಳೂರು ಹೊರವಲಯದಲ್ಲಿರುವ ಮಾಜಿ ಶಾಸಕ ದಿವಂಗತ ಬಿ.ಎಂ ಇದಿನಬ್ಬ ಪುತ್ರ ಬಿ.ಎಂ. ಭಾಷಾ ಮನೆ ಎನ್‌ಐಎ ದಾಳಿ ನಡೆಸಿ, ಶೋಧ ಕಾರ್ಯ ನಡೆಸಿದ್ದು, ಐಸಿಸ್ ಸಂಘಟನೆಯೊಂದಿಗಿನ ನಂಟಿನ ಶಂಕೆ ಮೇರೆಗೆ ಅವರ ಸೊಸೆ ದೀಪ್ತಿ ಮರಿಯಂಳನ್ನು ವಶಕ್ಕೆ ಪಡೆಯಲಾಗಿದೆ.
ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ. ಬಿ.ಎಂ. ಭಾಷಾ ಸೊಸೆ ದೀಪ್ತಿ ಅಲಿಯಾಸ್ ಮರಿಯಂಳನ್ನು ವಶಕ್ಕೆ ಪಡೆಯಲಾಗಿದೆ.
ಇದೇ ಮನೆ ಮೇಲೆ ಕಳೆದ ಅ.4 ರಂದು ಎನ್‌ಐಎ ದಾಳಿ ನಡೆಸಿತ್ತು. ಅಂದು ಭಾಷಾ ಕಿರಿಯ ಪುತ್ರ ಅಬ್ದುಲ್ ರೆಹಮಾನ್ ಬಂಧಿಸಲಾಗಿತ್ತು. ಇದೀಗ ಭಾಷಾರ ಮತ್ತೊಬ್ಬ ಪುತ್ರ ಅನಾಸ್ ಪತ್ನಿ ದೀಪ್ತಿ ಮೇಲಿನ ಅನುಮಾನದಿಂದ ಮತ್ತೊಮ್ಮೆ ಮನೆ ಮೇಲೆ ಎನ್‌ಐಎ ದಾಳಿ ನಡೆಸಿ, ದೀಪ್ತಿ ಮರಿಯಂರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
Advertisement. Scroll to continue reading.

ಕೊಡಗು ಜಿಲ್ಲೆಯವರಾದ ದೀಪ್ತಿ ಅಲಿಯಾಸ್ ಮರಿಯಂ ಅನಾಸ್ ಅವರನ್ನು ಪ್ರೀತಿಸಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಮದುವೆಯಾಗಿದ್ದಾರೆ ಎನ್ನಲಾಗಿದೆ.
In this article:deepti aliyas mariamma, Diksoochi news, diksoochi Tv, diksoochi udupi, IAN, Idinabba, terrorist

Click to comment