ಲಾಹೋರ್: ಭಾರೀ ಹಿಮಪಾತಕ್ಕೆ ಹತ್ತು ಮಕ್ಕಳು ಸೇರಿದಂತೆ 22 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಪಿರ್ ಪಂಜಾಲ್ ಶ್ರೇಣಿಯ ಗಲ್ಯತ್ ಪ್ರದೇಶದ ರೆಸಾರ್ಟ್ ಟೌನ್ ಮುರ್ರಿ ಹಿಲ್ ಸ್ಟೇಷನ್ ನಲ್ಲಿ ನಡೆದಿದೆ.
ಪ್ರವಾಸಿಗರ ದಟ್ಟಣೆಯ ಹೆಚ್ಚಳದಿಂದಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದ್ದು, ಮುರ್ರೆಯನ್ನು ವಿಪತ್ತು ಪ್ರದೇಶವೆಂದು ಘೋಷಿಸಲಾಗಿದೆ.
ಪಾಕಿಸ್ತಾನದ ಗಿರಿಧಾಮ ಮುರ್ರೆ ನೋಡಲು ಬಂದಿದ್ದ ಅನೇಕ ಪ್ರವಾಸಿಗರು ರಾತ್ರಿಯಿಡೀ ಭಾರೀ ಹಿಮಪಾತದ ನಡುವೆ ಸಿಲುಕಿದ್ದಾರೆ. ಇಲ್ಲಿನ ರಸ್ತೆಗಳು ಸಂಪೂರ್ಣವಾಗಿ ಮುಚ್ಚಿಹೋಗಿದ್ದು, ಸಾವಿರಾರು ವಾಹನಗಳು ಗಿರಿಧಾಮದಲ್ಲಿ ಸಿಲುಕಿಕೊಂಡಿವೆ. ಈ ವೇಳೆ ವಾಹನಗಳ ನೂಕು ನುಗ್ಗಲು ಉಂಟಾಗಿದೆ. ಜನರು ಎಲ್ಲಿಯೂ ಹೋಗಲು ಸಾಧ್ಯವಾಗದೇ, ವಾಹನಗಳಲ್ಲೇ ಸಿಲುಕಿದ ಪರಿಣಾಮ ಹತ್ತು ಮಕ್ಕಳು ಸೇರಿದಂತೆ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
Advertisement. Scroll to continue reading.
