Connect with us

Hi, what are you looking for?

Diksoochi News

ಕರಾವಳಿ

ಕೋಟ: ರಂಗ ಸಂವಾದ ಕಾರ್ಯಕ್ರಮ

1

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಯಕ್ಷಗಾನ ಮೊದಲಿನಂತೆ ಉಳಿಯಬೇಕಾದರೆ ಸರಕಾರ ಅದನ್ನು ಎತ್ತಿಹಿಡಿಯಬೇಕು. ಬೇಕಾಗುವಂತಹ ವಾತಾವರಣವನ್ನು ಪೂರಕ ಸ್ಥಿತಿ- ಗತಿಯನ್ನು ಸರಕಾರ ಒದಗಿಸಬೇಕು ಎಂದು ಸಾಂಪ್ರದಾಯಿಕ ಯಕ್ಷಗಾನ ರಂಗದ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ನುಡಿದರು.

ರಸರಂಗ ಕೋಟವು ಸಮಸ್ತರು ಬೆಂಗಳೂರು ಇದರ ಸಹಯೋಗದಲ್ಲಿ , ಹಂಗಾರಕಟ್ಟೆ ಯಕ್ಷಗಾನ ಕಲಾ ಕೇಂದ್ರದ ಸಹಕಾರದಲ್ಲಿ ಸದಾನಂದ ರಂಗಮಂಟಪ ಗುಂಡ್ಮಿಯಲ್ಲಿ ನಡೆದ ರಂಗಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಿದ್ದರು.
ಸಂಪ್ರದಾಯ ಬಲ್ಲ ಹಳೆಯ ಕಲಾವಿದರನ್ನು ಕಲೆಹಾಕಿ,ಉಡುಪಿ ಜಿಲ್ಲೆಯ ಯಕ್ಷಗಾನದ ಕುರಿತಾದ ಯೋಜನೆ-ಯೋಚನೆಗಳನ್ನ ರೂಪಿಸಿಕೊಂಡು ಅದನ್ನ ಅನುಷ್ಠಾನಕ್ಕೆ ತಂದರೆ ಈ ಭಾಗದ ಪಾರಂಪರಿಕ ಕಲೆ ಉಳಿಯುತ್ತದೆ ಎಂದರು.

Advertisement. Scroll to continue reading.


ಐರೋಡಿಯವರು ಸಾಂಪ್ರದಾಯಿಕ ಯಕ್ಷಗಾನ ಹಾಗೂ ಯಕ್ಷಗಾನದ ಪಾರಂಪರಿಕ ಶೈಲಿಯ ಓರ್ವ ಶ್ರೇಷ್ಟ ಕಲಾವಿದ. ಇಂತಹ ಕಲೆ ಮುಂದೆಯೂ ಉಳಿಯಬೇಕಾದರೆ ಅದನ್ನು ಕಲಿಸುವ -ಕಲಿಯುವ ಕೆಲಸವಾಗಬೇಕು ಅಂತಹ ಆಸಕ್ತ ಕಲಾಕೇಂದ್ರಗಳಿಗೆ ಸರಕಾರದ ಪ್ರೋತ್ಸಾಹಬೇಕು ಎಂದರಲ್ಲದೆ ಸರಕಾರವು ಆ ಉದ್ದೇಶಕ್ಕಾಗಿಯೇ ಕಲಾಕೇಂದ್ರಗಳನ್ನ ಪ್ರೋತ್ಸಾಹಿಸಬೇಕು ಅಂತರರಾಷ್ಟ್ರೀಯ ಖ್ಯಾತಿಯ ರಂಗನಿರ್ದೇಶಕರು ಗೋಷ್ಟಿಯ ಅಧ್ಯಕ್ಷ ಗೋಪಾಲಕೃಷ್ಣ ನಾಯರಿಯವರು ನುಡಿದರು.
ಕಾರ್ಕಳದಲ್ಲಿ ಮುಂದೆ ಬರಲಿರುವ ಯಕ್ಷರಂಗಾಯಣ ಈ ಭಾಗದ ಪ್ರಾದೇಶಿಕ ಯಕ್ಷಗಾನಕ್ಕೆ ಹೆಚ್ಚಿನ ಮನ್ಮಣೆಯನ್ನು ನೀಡಲಿ,ಅಲ್ಲಿ ಸಾಂಪ್ರದಾಯದ ಯಕ್ಷರೆಪರ್ಟ ಅರಂಭವಾಗಲಿ ಎಂದು ಸಂವಾದಕರಲ್ಲಿ ಒಬ್ಬರಾದ ಸುರೇಂದ್ರ ಪಣಿಯೂರುರವರು ಅಭಿಪ್ರಾಯಿಸಿದರು.


ಸಂವಾದಕ ಮಿತ್ರರಾಗಿ ಸದಾನಂದ ಪಾಟೀಲ್, ಸುರೇಂದ್ರ ಪಣಿಯೂರು, ಗಣೇಶ್ ಜಿ.ಚಲ್ಲೆಮಕ್ಕಿ, ಪ್ರೋ.ಸಂಜೀವ ಗುಂಡ್ಮಿ ಸಹಕರಿಸಿದರು.
ಕಲಾಕೇಂದ್ರದ ಸಂಚಾಲಕರಾದ ರಾಜಶೇಖರ ಹೆಬ್ಬಾರ್, ರಸರಂಗದ ಅಧ್ಯಕ್ಷೆ ಸುಧಾ ಮಣೂರುರವರು ಉಪಸ್ಥಿತರಿದ್ದರು. ರಾಮಚಂದ್ರ ಐತಾಳ ಗುಂಡ್ಮಿ ಇವರು ಗೋಷ್ಟಿಯನ್ನು ನಿರ್ವಹಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ರಾಜ್ಯ

1 ಬೆಂಗಳೂರು:  ಪ್ರಧಾನಿ ಮೋದಿ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು...

ರಾಷ್ಟ್ರೀಯ

1 ಬೆಂಗಳೂರು: ಎನ್‌ಡಿಎ ಮೈತ್ರಿಕೂಟದಡಿ ‘ಅಬ್‌ ಕಿ ಬಾರ್‌ 400 ಪಾರ್‌’ ಘೋಷಣೆ ಮೊಳಗಿಸಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ 370 ಸ್ಥಾನ ಗೆಲ್ಲುವ ಮಹತ್ವಾಕಾಂಕ್ಷೆ ಹೊಂದಿದೆ. ಈ ಗುರಿ ತಲುಪಲು ಟಿಕೆಟ್‌ ಹಂಚಿಕೆ...

ಅರೆ ಹೌದಾ!

0 ಬೆಂಗಳೂರು: ಫ್ರೀ ಟಿಕೆಟ್‌ ಎಂದು ಪಕ್ಷಿಗಳನ್ನು ಜೊತೆಗಿಟ್ಟುಕೊಂಡು ಬಸ್‌ ಹತ್ತಿದ್ದ ಅಜ್ಜಿ – ಮೊಮ್ಮಗಳಿಗೆ ಕಂಡಕ್ಟರ್‌ ನೀಡಿದ ಟಿಕೆಟ್‌ ದೊಡ್ಡ ಶಾಕ್‌ ನೀಡಿದೆ. ಪಕ್ಷಿಗಳಿಗೆ ಟಿಕೆಟ್ ನೀಡಬೇಕೆನ್ನುವುದು ನಿಯಮವಾದರೂ ನೀಡಿದ ಟಿಕೆಟ್...

ರಾಷ್ಟ್ರೀಯ

1 ಬೆಂಗಳೂರು: ದೆಹಲಿ ಮದ್ಯ ಹಗರಣದಲ್ಲಿ ಬಂಧನಕ್ಕೆ ಒಳಗಾಗಿರುವ ಅರವಿಂದ್‌ ಕೇಜ್ರಿವಾಲ್‌ ಅವರು ಖಲಿಸ್ತಾನಿ ಗುಂಪುಗಳಿಂದ 16 ಮಿಲಿಯನ್‌ ಡಾಲರ್‌ (ಅಂದಾಜು 133.54 ಕೋಟಿ ರು.) ಪಡೆದಿರುವ ಗಂಭೀರ ಆರೋಪ ಕೇಳಿ ಬಂದಿದೆ. ಭಾರತಕ್ಕೆ...

ರಾಷ್ಟ್ರೀಯ

0 ಮುಂಬೈ: ಮಸೀದಿಯಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದ ವಿದ್ಯಾರ್ಥಿಯನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ  ಥಾಣೆಯಲ್ಲಿ ನಡೆದಿದೆ. ಪ್ರಕರಣದ ಪ್ರಮುಖ ಆರೋಪಿ ಸಲ್ಮಾನ್‌ ಮೌಲ್ವಿ ಎಂದು ತಿಳಿದುಬಂದಿದೆ. ಈತ ಹೊಸ ಮನೆ ಕಟ್ಟಲು...

error: Content is protected !!