ನವದೆಹಲಿ: covid -19 ಪ್ರಕರಣಗಳ ಜಾಗತಿಕ ಉಲ್ಬಣದಿಂದಾಗಿ ಉಜ್ಬೇಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿ ನಡೆಯಲಿರುವ ಪುರುಷ ಮತ್ತು ಮಹಿಳೆಯರ ಏಷ್ಯನ್ ಅಂಡರ್ -22 ಚಾಂಪಿಯನ್‌ಶಿಪ್‌ನಿಂದ ಹೊರಬರಲು ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ ನಿರ್ಧರಿಸಿದೆ.
ಆದರೆ ಪಂದ್ಯಾವಳಿಯನ್ನು ಕೊವಿಡ್ ಕಡಿಮೆಯಾದ ಸಮಯದಲ್ಲಿ ಮರು ನಿಗದಿಪಡಿಸಿದಲ್ಲಿ ಭಾಗವಹಿಸಲು ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.
ಏಷ್ಯನ್ ಬಾಕ್ಸಿಂಗ್ ಒಕ್ಕೂಟಕ್ಕೆ ಹಾಗೂ ಟೂರ್ನಿಯ ಆಯೋಜಕ ಸಮಿತಿಗೆ ಭಾರತ ವಾಪಸಾತಿಯನ್ನು ದೃಢಪಡಿಸುವ ಪತ್ರವನ್ನು ಕಳುಹಿಸಲಾಗಿದೆ ಎಂದು ಫೆಡರೇಶನ್‌ನ ವಿಶ್ವಾಸಾರ್ಹ ಮೂಲವು ಪಿಟಿಐಗೆ ಖಚಿತಪಡಿಸಿದೆ. ಈವೆಂಟನ್ನು ಜನವರಿ 20 ರಿಂದ 30 ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಏಷ್ಯನ್ ಈವೆಂಟ್ ಅನ್ನು ಮೂಲತಃ ಕಳೆದ ವರ್ಷ ಡಿಸೆಂಬರ್ 7 ರಿಂದ 17 ರವರೆಗೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ಮುಂದೂಡಲಾಗಿತ್ತು.

1999, 2000, 2001 ಮತ್ತು 2002 ರಲ್ಲಿ ಜನಿಸಿದ ಬಾಕ್ಸರ್‌ಗಳು ಖಂಡದಲ್ಲಿ ಮೊದಲ ಬಾರಿಗೆ ನಡೆಯುವ ಈವೆಂಟ್‌ನಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ. 12 ಮಹಿಳೆಯರ ಹಾಗೂ 13 ಪುರುಷರ ತೂಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಬೇಕಿತ್ತು.
ಈಗಾಗಲೇ ಭಾರತೀಯ ಬಾಕ್ಸಿಂಗ್ ಕೋವಿಡ್ ಸಮಸ್ಯೆ ಕಾಡುತ್ತಿದ್ದು, ಪಟಿಯಾಲದಲ್ಲಿರುವ ಪುರುಷರ ಹಿರಿಯ ರಾಷ್ಟ್ರೀಯ ಶಿಬಿರದಲ್ಲಿ 20 ಬಾಕ್ಸರ್‌ಗಳು ಸೇರಿದಂತೆ 26 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಭಾರತೀಯ ಪುರುಷರ ತಂಡದಲ್ಲಿ ಏಷ್ಯಾದ ಯುವ ಕಂಚಿನ ಪದಕ ವಿಜೇತ ಮೊಹಮ್ಮದ್ ಎತಾಶ್ ಖಾನ್ (63.5 ಕೆಜಿ) ಮತ್ತು ಹಾಲಿ ರಾಷ್ಟ್ರೀಯ ಚಾಂಪಿಯನ್ ರೋಹಿತ್ ಮೋರ್ (60 ಕೆಜಿ) ಸೇರಿದಂತೆ ಮೊದಲಾದವರು ಭಾಗವಹಿಸಲಿದ್ದರು. ಮಹಿಳಾ ತಂಡದಲ್ಲಿ ವಿಶ್ವ ಯೂತ್ ಚಾಂಪಿಯನ್ ಅರುಂಧತಿ ಚೌಧರಿ (71 ಕೆಜಿ) ಮತ್ತು ಅಂತಾರಾಷ್ಟ್ರೀಯ ಪದಕ ವಿಜೇತೆ ಜೈಸ್ಮಿನ್ (63 ಕೆಜಿ) ಭಾಗವಹಿಸಲಿದ್ದರು.

