ವರದಿ : ಬಿ.ಎಸ್. ಆಚಾರ್ಯ
ಬಾರಕೂರು: ಕಚ್ಚೂರು ಮಾಲ್ತೀದೇವಿ ದೇವಸ್ಥಾನ ಮತ್ತು ಬಬ್ಬು ಸ್ವಾಮಿ ಮೂಲಕ್ಷೇತ್ರದಲ್ಲಿ ಪ್ರತೀ ವರ್ಷ ಜನವರಿ 2ನೇ ವಾರದ ಶುಕ್ರವಾರದಿಂದ ಸೋಮವಾರದ ತನಕ 5 ಜಿಲ್ಲೆಯಿಂದ ಸಹಸ್ರಾರು ಭಕ್ತಾಧಿಗಳು ಭಾಗವಹಿಸುವ ರಥೋತ್ಸವ ಮತ್ತು ಗೆಂಡೋತ್ಸವ ಮತ್ತು ದೀಪೋತ್ಸವ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಸರಳವಾಗಿ ಪೂಜಾ ವಿಧಿಗಳನ್ನು ಮಾತ್ರ ಮಾಡಲಾಯಿತು.

ದೇವಸ್ಥಾನದ ಆಡಳಿತ ಮಂಡಳಿಯವರು ದೇಶಕ್ಕೆ ಬಂದ ಆಪತ್ತುಗಳನ್ನು ನಿವಾರಣೆ ಯಾಗಿ ಜಾತ್ರೆ ಕೂಡಲೆ ನೆರವೇರುವಂತೆ ನಡೆದು ಎಲ್ಲಾ ಭಾಗದ ಜನರು ದೇವಸ್ಥಾನಕ್ಕೆ ಬರುವಂತೆ ಆಗಲಿ ಎಂದು ಇಲ್ಲಿನ ಪರಿವಾರ ದೈವಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಿದರು.

ಇದೇ ಸಂದರ್ಬದಲ್ಲಿ ರಥೋತ್ಸವಕ್ಕಾಗಿ ನೂತನವಾಗಿ ನಿರ್ಮಾಣವಾದ ಬಂಡೀಮಠ ಕೃಷ್ಣಯ್ಯ ಆಚಾರ್ಯರು ರಚಿಸಿದ ಬಡಗು ತಿಟ್ಟಿನ ಯಕ್ಷಗಾನ ಮಾದರಿಯ 2 ತಟ್ಟಿರಾಯನನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು.

ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರು ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.
Advertisement. Scroll to continue reading.
