ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ರೋಟರಿ ಬ್ರಹ್ಮಾವರದ ಸದಸ್ಯರ ಕೌಟುಂಬಿಕ ಸಭೆ ಹಾಗೂ ವೃತ್ತಿಪರ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ಇತ್ತೀಚೆಗೆ ಬ್ರಹ್ಮಾವರದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಬ್ರಹ್ಮಾವರದ ಅಧ್ಯಕ್ಷರಾದ ಹರೀಶ್ ಕುಂದರ್ ವಹಿಸಿದ್ದರು.ಈ ವೇಳೆ ಸ್ಪಂದನ ಬೌದ್ಧಿಕ ದಿವ್ಯಾಂಗರ ವಿಶೇಷ ಸಂಸ್ಥೆಯನ್ನು ನಡೆಸುತ್ತಿರುವ ಜನಾರ್ದನ, ಟಿಪ್ಸ್ ಸೆಷನ್ಸ್ ಚಾರಿಟೇಬಲ್ ಟ್ರಸ್ಟ್ ಮೂಲಕ ಹಲವಾರು ಜಿಲ್ಲೆಗಳ ಕಸ ವಿಲೇವಾರಿ ಘಟಕವನ್ನು ನಿರ್ವಹಿಸುತ್ತಿರುವ ವಿಜಯಲಕ್ಷ್ಮಿ, ಮೆಸ್ಕಾಂನಲ್ಲಿ ತನ್ನ ಸೇವೆಯಿಂದ ಜನಪ್ರಿಯರಾದ ಭಾಗ್ಯಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು.


ಇದೇ ವೇಳೆ ಇಂದ್ರಾಳಿ ಜಯಕರ ಶೆಟ್ಟಿ ಅವರನ್ನು ತಮ್ಮ ವೃತ್ತಿಯಲ್ಲಿ ಹಾಗೂ ಸಾಮಾಜಿಕ ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ವಿಶೇಷ ಸಾಧನೆಗಳಿಗಾಗಿ ರೋಟರಿ ಬ್ರಹ್ಮಾವರದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಲಯನ್ಸ್ ಮಾಜಿ ಗವರ್ನರ್ ಇಂದ್ರಾಳಿ ಜಯಕರ ಶೆಟ್ಟಿ, ಜಿಲ್ಲಾ ಅವಾರ್ಡ್ ಕಮಿಟಿ ಚೇರ್ಮೆನ್ ಪುಂಡಲಿಕ ಮರಾಠಿ, ಅಸಿಸ್ಟೆಂಟ್ ಗವರ್ನರ್ ಪದ್ಮನಾಭ ಕಾಂಚನ್, ವೃತ್ತಿ ಸೇವಾ ನಿರ್ದೇಶಕ ಪ್ರಾಣೇಶ್ ಎಸ್. ಕೆ., ಕಾರ್ಯದರ್ಶಿ ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.
