Connect with us

Hi, what are you looking for?

Diksoochi News

ರಾಜ್ಯ

ಸಿಎಂ ಬೊಮ್ಮಾಯಿ ಚೊಚ್ಚಲ ಬಜೆಟ್ ಮಂಡನೆ; ಬಜೆಟ್ ಮುಖ್ಯಾಂಶಗಳು

0

ಬೆಂಗಳೂರು : ಇಂದು 2022-23 ನೇ ಸಾಲಿನ ಬಜೆಟ್ ನ್ನು ಸಿಎಂ ಬಸವರಾಜ್ ಬೊಮ್ಮಾಯಿ ಮಂಡಿಸಿದರು. 2 ಗಂಟೆ 11ನಿಮಿಷಗಳಷ್ಟು ಸುದೀರ್ಘವಾಗಿ, 2 ಲಕ್ಷದ 65 ಸಾವಿರದ 720 ಕೋಟಿ ಗಾತ್ರದ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದರು.

  • ಯಂತ್ರೋಪಕರಣಗಳ ಖರೀದಿಗೆ ರೈತ ಶಕ್ತಿ ಯೋಜನೆ ಘೋಷಣೆ
  • ರೈತ ಶಕ್ತಿ ಯೋಜನೆಗೆ 500 ಕೋಟಿ ಮೀಸಲು
  • ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸ್ಥಾಪಿಸಲು 50 ಕೋ.ನಿಗದಿ
  • ಎಕರೆಗೆ 250 ರೂ.ನಂತೆ ಗರಿಷ್ಠ 5
  • ರೈತರ ಆದಾಯ ಹೆಚ್ಚಿಸಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ
  • ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಮಿನಿ ಆಹಾರ ಪಾರ್ಕ್
  • ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಕೃಷಿ ಕಾಲೇಜು ಸ್ಥಾಪನೆ
  • ಮೇಕೆದಾಟು ಯೋಜನೆಗೆ 1000ಕೋಟಿ ರೂ.
  • ಎತ್ತಿನಹೊಳೆ ಯೋಜನೆಗೆ 3 ಸಾ.ಕೋಟಿ.
  • ಕೃಷ್ಣ ಮೇಲ್ದಂಡೆ
  • ಹಾವೇರಿಯಲ್ಲಿ ಒಂದು ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆ
  • ಬೆಂಗಳೂರು ಅಭಿವೃದ್ಧಿಗೆ 8,409 ಕೋಟಿ ಮೀಸಲು
  • ಮರಾಠ ಅಭಿವೃದ್ಧಿಗೆ 50 ಕೋ.,ವೀರ ಶೈವ ಲಿಂಗಾಯತ, ಒಕ್ಕಲಿಗ ಅಭಿವೃದ್ಧಿಗೆ 100 ಕೋ.,ಕೊಡವ ಜನಾಂಗ ಅಭಿವೃದ್ಧಿಗೆ 10 ಕೋ., ಕ್ರಿಶ್ಚಿಯನ್, ಜೈನ, ಬೌದ್ಧ ,ಸಿಖ್, ಅಭಿವೃದ್ಧಿಗೆ 50 ಕೋ.
  • ನಾರಾಯಣ ಗುರು ಸ್ಮರಣಾರ್ಥ ಉಡುಪಿ, ಮಂಗಳೂರು, ಶಿವಮೊಗ್ಗದಲ್ಲಿ ನಾರಾಯಣಗುರು ವಸತಿ ಶಾಲೆ
  • ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ ಮಕ್ಕಳಿಗೆ ಇಂಗ್ಲೀಷ್ ಕಲಿಯಲು 5 ಕೋ.
  • ಪುಣ್ಯಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳಿಗೆ
  • 30,000 ಕಾಶಿ ಯಾತ್ರಿಗಳಿಗೆ, 5000
  • ಪುಣ್ಯಕೋಟಿ ದತ್ತು ಯೋಜನೆ
  • ಕೆ ಎಂ ಎಫ್ ಮೂಲಕ ಸ್ಥಳೀಯ ಗೋವು ತಳಿ ವಿತರಣೆ
  • ಗೋಮಾತಾ ಸರ್ಕಾರಿ ಸಂಘ ಸ್ಥಾಪನೆ
  • ಮತ್ಸ್ಯಸಿರಿ ಯೋಜನೆ ಜಾರಿ
  • ಕಡಲ್ಕೊರೆತ ತಡೆಗಟ್ಟಲು ಹೊಸಕ್ರಮ
  • ಪೆಟ್ರೋಲ್,ಡಿಸೇಲ್ ಮೇಲಿನ ರಾಜ್ಯ ಸುಂಕ ಏರಿಕೆ ಇಲ್ಲ
  • ಸಿನಿಮಾ ಸಬ್ಸಿಡಿ 125 ರಿಂದ 200 ಕನ್ನಡ ಚಿತ್ರಗಳಿಗೆ ಏರಿಕೆ
  • ಆಶಾ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ. ಬಿಸಿಯೂಟ ತಯಾರಿಕರಿಗೆ 1000 ರೂ.ಹೆಚ್ಚಳ. ಅಂಗನವಾಡಿ ಕಾರ್ಯಕರ್ತೆಯರಿಗೆ 1,000 ದಿಂದ 1,5000 ಕ್ಕೆ ಗೌರವ ಧನ ಹೆಚ್ಚಳ
  • ಕೊಪ್ಪಳದ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಮಾಡಲಾಗುತ್ತದೆ
  • ಜೋಗ ಜಲಪಾತದಲ್ಲಿ 116 ಕೋ.ರೂ.ವೆಚ್ಚದಲ್ಲಿ ಹೊಟೇಲ್ ಹಾಗೂ ರೋಪ್ ವೇ ಅಭಿವೃದ್ಧಿ
  • ನಂದಿ ಬೆಟ್ಟದಲ್ಲಿ 93 ಕೋ.ರೂ. ವೆಚ್ಚದಲ್ಲಿ ರೋಪ್ ವೇ
  • ಬೆಂಗಳೂರಿಗೆ ಜ್ಯುವೆಲ್ಲರಿ ಪಾರ್ಕ್
  • ವಿಧವಾ ವೇತನಾ 200 ರೂ.ಹೆಚ್ಚಳ
  • ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಪತ್ಯೇಕ
  • ಹುಬ್ಬಳ್ಳಿ ಜಯದೇವ ಆಸ್ಪತ್ರೆ, ಬೆಳಗಾವಿಯಲ್ಲಿ ಕಿದ್ವಾಯಿ ಆಸ್ಪತ್ರೆ
  • ಬೆಂಗಳೂರು ನಗರದ ನಾಲ್ಕು ಭಾಗದಲ್ಲಿ 500 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುತ್ತದೆ
  • ಬಾಗಲಕೋಟೆಯಲ್ಲಿ 7 ವಿವಿ ಸ್ಥಾಪನೆ
  • ರಾಜ್ಯಾದ್ಯಂತ ಡಿಜಿಟಲ್‌ ಗ್ರಂಥಾಲಯ
  • ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಮೀನುಗಾರಿಕಾ ಬಂದರು ಸ್ಥಾಪನೆ, ಬೈಂದೂರು, ಮಲ್ಪೆ ಬಂದರು ನಿರ್ಮಾಣ, ಪ್ರಧಾನಮಂತ್ರಿ ಮತ್ಸ್ಯ ಸಂಒದ ಯೋಜನೆಯಡಿ 250 ಕೋ.ಮೀಸಲು
  • ಉತ್ತರಕನ್ನಡದ ಕೇಣಿ – ಬೇಣಿಕೇರಿಯಲ್ಲಿ ಗ್ರೀನ್ ಫಿಲ್ಡ್ ಬಂದರು
  • ರಾಜ್ಯದಲ್ಲಿ ಕೇಂದ್ರದ ಸಹಕಾರದೊಂದಿಗೆ ರೈಲು ಮಾರ್ಗ
  • 20 ನೂತನ ರೈಲ್ವೆ, ಮೇಲ್ಸೇತುವೆ ಸ್ಥಾಪನೆ
  • ಸರ್ವರಿಗೂ ಸೂರು ಯೋಜನೆಯಡಿ 5 ಲಕ್ಷ ಹೊಸ ಮನೆ ನಿರ್ಮಾಣಕ್ಕೆ 6,612 ಕೋ.
  • ವೈದ್ಯಕೀಯ ಸೌಲಭ್ಯ ನೀಡುವ ಯಶಸ್ವಿನಿ ಯೋಜನೆ ಮತ್ತೆ ಜಾರಿ
  • ರೈತ ಮಹಿಳೆಯರಿಗೆ 5 ಲಕ್ಷ ಕೋಳಿ ಮರಿ ವಿತರಣೆಗೆ ಕ್ರಮ
  • ಶ್ರೀಮತಿ ಸಾವಿತ್ರಿ ಬಾಯಿ ಫುಲೆ ಹೆಸರಿನಲ್ಲಿ ಪ್ರತಿವರ್ಷ ರಾಜ್ಯ ಮಟ್ಟದ ಆದರ್ಶ ಶಿಕ್ಷಕ/ಶಿಕ್ಷಕಿ ಪ್ರಶಸ್ತಿ
  • ದೇವಾಲಯಗಳಿಗೆ ಸ್ವಯತ್ತತೆ
  • ಯಲಹಂಕದಲ್ಲಿ ಅಟಲ್ ಬಿಹಾರಿ ವಾಜಪೇಯಿ ಉದ್ಯಾನವನ
  • ಕೊಲ್ಲೂರು, ಧರ್ಮಸ್ಥಳ, ತಿರುಪತಿ, ಮಂತ್ರಾಲಯಕ್ಕೆ ಪ್ಯಾಕೇಜ್ ಟ್ರಿಪ್ ಸೇವೆ
  • ಹಾವೇರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು 20 ಕೋ.ಅನುದಾನ, ರಾಜ್ಯಮಟ್ಟದಲ್ಲಿ ಯಕ್ಷಗಾನ ಸಮ್ಮೇಳನ ಆಯೋಜನೆ, ಕಾಸರಗೋಡು, ಅಕ್ಕಲಕೋಟೆ, ಗೋವಾದಲ್ಲಿ ಕನ್ನಡ ಭವನ ನಿರ್ಮಾಣ
  • ಸಾಹಿತಿಗಳಾದ ಡಾ.ಸಿದ್ಧಲಿಂಗಯ್ಯ, ಡಾ.ಎಂ.ಚಿದಾನಂದಮೂರ್ತಿ,ಚನ್ನವೀರ ಕಣವಿ, ಡಾ.ಚಂದ್ರಶೇಖರ ಪಾಟೀಲ್ ಸಾಹಿತ್ಯ ಪ್ರಚಾರಕ್ಕೆ ಕ್ರಮ
  • ರಾಜ್ಯದಲ್ಲಿ ರೇಷ್ಮೆ ಬೆಳೆಗಾರರಿಗೆ ಅತ್ಯಾಧುನಿಕ ಮಾರುಕಟ್ಟೆ ಸೌಲಭ್ಯವನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಕಲಬುರಗಿ ಮತ್ತು ಹಾವೇರಿ ಜಿಲ್ಲೆಯಲ್ಲಿ ನಬಾರ್ಡ್ ನೆರವಿನೊಂದಿಗೆ 30 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಹೈಟೆಕ್ ರೇಷ್ಮೆ ಮಾರುಕಟ್ಟೆ ನಿರ್ಮಾಣ ಮಾಡಲಾಗುತ್ತದೆ.
  • ರೇಷ್ಮೆ ಬೆಳೆಗಾರರ ಆದಾಯವನ್ನು ಹೆಚ್ಚಿಸಲು ದ್ವಿತಳಿ ಬಿತ್ತನೆ ಗೂಡಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಪ್ರತಿ ಕೆಜಿಗೆ 50 ರೂ.ಗಳಷ್ಟು ಹೆಚ್ಚಿಸಲಾಗುತ್ತದೆ.
  • ಮಂಡ್ಯದ ಕೆ. ಆರ್. ಪೇಟೆಯಲ್ಲಿ ರೇಷ್ಮೆ ಎಲ್ಲಾ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ಕೇಂದ್ರವನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡಲಾಗುತ್ತದೆ.
  • ಚಿಕ್ಕಮಗಳೂರು, ಹಂಪಿ ಹೆಲಿಪೋರ್ಟ್ ನಿರ್ಮಾಣ
  • ಕರಾವಳಿಯಲ್ಲಿ ಬ್ಲೂ ಪ್ಲಾಸ್ಟಿಕ್ ನಿರ್ವಹಣಾ ಯೋಜನೆ
  • ಹಾಸನ, ಚಿಕ್ಕಮಗಳೂರಿನಲ್ಲಿ ಆನೆ ಹಾವಳಿ ತಡೆಗಟ್ಟಲು ಕ್ರಮ
  • ಪ್ರಮುಖ ನಗರಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪನೆ, ದೆಹಲಿ ಮಾದರಿಯಲ್ಲಿ ಮೊಹಲ್ಲಾ ಕ್ಲಿನಿಕ್ ಸ್ಥಾಪನೆ
  • ಆಸಿಡ್ ಸಂತ್ರಸ್ಥೆಯರಿಗೆ 10000 ರೂ.ಮಾಸಾಶನ
  • ಕಟ್ಟಡ ಕಾರ್ಮಿಕರಿಗೆ ಹೈಟೆಕ್ ಸಂಚಾರಿ ಕ್ಲಿನಿಕ್
  • ಬಿಪಿಎಲ್ ಕಾರ್ಡ್ ದಾರರಿಗೆ 1 ಕೆಜಿ ಹೆಚ್ಚುವರಿ ರಾಗಿ/ಜೋಳ
  • ರಾಮನಗರದ ಅರ್ಚಕರಹಳ್ಳಿಯಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಆರಂಭಿಸಲಾಗುತ್ತದೆ. ನೀಟ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲಾಗುತ್ತದೆ.

Click to comment

Leave a Reply

Your email address will not be published. Required fields are marked *

You May Also Like

ಅರೆ ಹೌದಾ!

1 ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯ ವೇಷವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ....

ರಾಜ್ಯ

0 ಮಂಡ್ಯ: ಐಸ್ ಕ್ರೀಮ್ ಸೇವನೆ ಮಾಡಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್...

ರಾಷ್ಟ್ರೀಯ

0 ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿರಿಯ ವಕೀಲ...

ರಾಷ್ಟ್ರೀಯ

0 ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ ‘ಶುಗರ್’ ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ...

ರಾಜ್ಯ

1 ಹುಬ್ಬಳ್ಳಿ : ಕಾರ್ಪೋರೇಟರ್ ನಿರಂಜನ್ ಹಿರೇಮಠ ಎಂಬವರ ಮಗಳನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನಡೆದಿದೆ.ನೇಹಾ ಹಿರೇಮಠ ಹತ್ಯೆಯಾದ ವಿದ್ಯಾರ್ಥಿನಿ. ಕಾಲೇಜ್ ಕ್ಯಾಂಪಸ್ ನಲ್ಲಿರುವ ಕ್ಯಾಂಟೀನ್ ನಲ್ಲಿ...

error: Content is protected !!