ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಬಾರಕೂರು ನಂಬಿಯಾರ್ಸ್ ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ರೆಯಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಸ್ಪತ್ರೆ ವಠಾರದಲ್ಲಿ ಜರುಗಿತು.
ಮಧುಮೇಹ ಸಂಬಂಧಿ ಕಾಯಿಲೆ, ಮೂಳೆ ಸಾಂದ್ರತೆ ಪರೀಕ್ಷೆ , ಸಂಧೀರೋಗ , ಸ್ತ್ರೀ ರೋಗ ಸಂಬಂಧಿತ ಪರೀಕ್ಷೆ ಮತ್ತು ಚಿಕಿತ್ಸೆ, ಮೂತ್ರ ಕೋಶ, ಶ್ವಾಸಕೋಶ, ಉದರ ಸಂಬಂಧಿ ಕಾಯಿಲೆಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು.
ನಾನಾ ಭಾಗದ ನೂರಾರು ಮಂದಿ ಶಿಬಿರದಲ್ಲಿ ಭಾಗವಹಿಸಿ ಶಿಭಿರದ ಪ್ರಯೋಜನ ಪಡೆದರು.
ತಜ್ಞ ವೈದ್ಯರಾದ ಡಾ .ರಾಮ್ ಪ್ರಕಾಶ್ ನಂಬಿಯಾರ್, ಡಾ. ಕೃಷ್ಣ ಕುಮಾರ್ ನಂಬಿಯಾರ್ , ಡಾ. ಸೌಮ್ಯ ನಂಬಿಯಾರ್, ಡಾ ವಿನಿತಾ ನಂಬಿಯಾರ್, ಡಾ.ಹರ್ಷ ನಂಬಿಯಾರ್ ಪರಿಶೀಲನೆ ಮಾಡಿ ಚಿಕಿತ್ಸೆ ನೀಡಿದರು.
ಬಾರಕೂರಿನಲ್ಲಿ 100 ವರ್ಷದಿಂದ ನಮ್ಮದು 3 ನೇ ತಲೆಮಾರಿನಿಂದ ಆಯುರ್ವೇದ ಚಿಕಿತ್ಸೆ ನೀಡುತ್ತಿದ್ದು, ನಮ್ಮ ತಂದೆಯವರ ನಿಧನದ ಪ್ರಥಮ ವರ್ಷ ಇಂದು ಆ ಕಾರಣದಿಂದ ಅವರ ನೆನಪಿಗೆ ಆಸ್ಪತ್ರೆಯಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ ಹಲಾವರು ಜನರು ಶಿಬಿರದ ಪ್ರಯೋಜನ ಪಡೆದರು.ಡಾ. ಕೃಷ್ಣ ಕುಮಾರ್ ನಂಬಿಯಾರ್


