ಇಂಗ್ಲೆಂಡ್: ನೈಟ್‌ಕ್ಲಬ್‌ನಲ್ಲಿ ಆಕಸ್ಮಿಕವಾಗಿ ತನ್ನ ಕಾಲನ್ನು ತುಳಿದ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಬಾಡಿಬಿಲ್ಡರೊಬ್ಬ ಒಂದೇ ಗುದ್ದಿನಿಂದ ಹೊಡೆದು ಕೊಂದಿರುವ ಘಟನೆಗೆ ಸಂಬಂಧಪಟ್ಟಂತೆ ಆರೋಪಿಗೆ 11 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ಕಳೆದ ವರ್ಷ ಸೆಪ್ಟೆಂಬರ್ 2 ರಂದು ಘಟನೆ ನಡೆದಿದ್ದು, ರಾಬರ್ಟ್ ಸ್ಮೆಥರ್ಸ್ಟ್ ಮೃತಪಟ್ಟವನು. ಬಾಡಿ ಬಿಲ್ಡರ್ ರಾಬರ್ಟ್ ಓವನ್ ಗ್ರೋನ್ ಹಾಲ್ಗ್ ಕೊಲೆಗೈದಾತ.
ಬಾಡಿಬಿಲ್ಡರ್ ರಾಬರ್ಟ್ ಓವನ್ ಗ್ರೀನ್‌ಹಾಲ್ಗ್ ಹಾಗೂ ರಾಬರ್ಟ್ ಸ್ಮೆಥರ್ಸ್ಟ್ ಇಬ್ಬರೂ ಇಂಗ್ಲೆಂಡ್‌ನ ಬೋಲ್ಟನ್ ಟೌನ್‌ನಲ್ಲಿರುವ ಒಂದೇ ನೈಟ್‌ಕ್ಲಬ್‌ಗೆ ಆಗಮಿಸಿದ್ದರು. ಸಂಸ್ಥೆಯೊಂದರಲ್ಲಿ ಕಂಪನಿಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ 36 ವರ್ಷದ ಸ್ಮೆಥರ್ಸ್ಟ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಬಂದಿದ್ದರು ಎನ್ನಲಾಗಿದೆ.

ರಾತ್ರಿ 11:15 ರ ಸುಮಾರಿಗೆ ಸ್ಮೆಥರ್ಸ್ಟ್ ಆಕಸ್ಮಿಕವಾಗಿ ಬಾಡಿಬಿಲ್ಡರ್ ಕಾಲನ್ನು ತುಳಿದಿದ್ದಾರೆ. ಹೀಗಾಗಿ, ಸ್ಮೆಥರ್ಸ್ಟ್ ಕ್ಷಮೆಯಾಚಿಸಿದರು. ಆದಾಗ್ಯೂ, ಬಾಡಿಬಿಲ್ಡರ್ ಕ್ಲಬ್‌ನ ಬೂತ್‌ನಿಂದ ಎದ್ದು ನಿಂತು ಅಲ್ಲಿದ್ದ ಸ್ಮೆಥರ್ಸ್ಟ್ ಮತ್ತು ಬೇಟ್ಸ್ ಇಬ್ಬರಿಗೂ ಗುದ್ದಿದ್ದಾರೆ. ಈ ವೇಳೆ ಸ್ಮೆಥರ್ಸ್ಟ್ ಮೆದುಳಿಗೆ ಏಟಾಗಿದ್ದು, ಕೇವಲ ಒಂದು ಗಂಟೆಯ ನಂತರ ಸಾವನ್ನಪ್ಪಿದ್ದಾರೆ.
ಈ ವೇಳೆ ಗ್ರೀನ್‌ಹಾಲ್ಗ್ ಕೊಕೇನ್ ಮತ್ತು ಮದ್ಯ ಸೇವಿಸಿದ್ದರು ಎನ್ನಲಾಗಿದೆ.
ಆರೋಪಿ ಗ್ರೀನ್‌ಹಾಲ್ಗ್‌ಗೆ 11 ವರ್ಷಗಳಿಗಿಂತ ಹೆಚ್ಚು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

