ಹಾವಂಜೆ: ಇಲ್ಲಿನ ಕೊಳಲಗಿರಿಯ ನಿವಾಸಿ, ಕೆಎಂಸಿಯ ನಿವೃತ್ತ ಉದ್ಯೋಗಿ, ಪರಿಸರ ಪ್ರೇಮಿ, ಪೌಲ್..ಡಿ ಅಲ್ಮೇಡಾ ಅವರ ಮನೆಯ ಕನ್ನಡಿಗೆ ಬಂದು ಹಕ್ಕಿ ತನ್ನ ಪ್ರತಿ ಬಿಂಬ ಕಂಡು ವೇಗವಾಗಿ ಡಿಕ್ಕಿ ಹೊಡೆದು ಕೆಳಗೆ ಬಿದ್ದಿತ್ತು. ಈ ಬಲು ಅಪರೂಪದ ಹಕ್ಕಿಯಾದ ಕಿಂಗ್ ಫೀಶರ್(ಮಿಂಚುಳ್ಳಿ ಹಕ್ಕಿ) ತಕ್ಷಣ ಕಂಡು ಇದರ ವರ್ಣಮಯ ಗರಿಗಳನ್ನು ಕಂಡು ಆಕರ್ಷಿತರಾದ ಪೌಲ್ ಡಿ ಅಲ್ಮೇಡಾ ಅವರು ಹಕ್ಕಿಗೆ ನೀರು ಕುಡಿಸಿ ಆರೈಕೆ ಮಾಡಿ, ರಕ್ಷಿಸಿದ್ದಾರೆ.
ನಂತರ ಅದನ್ನು ಸುರಕ್ಷಿತವಾಗಿ ಅಂದೇ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಹಕ್ಕಿಯು ಸಣ್ಣ ಹೊಳೆ ಜರಿ, ತೊಡುಗಳಲ್ಲಿ ಕಂಡುಬರುತ್ತದೆ. ಈ ದಾರಿತಪ್ಪಿ ಇವರ ಮನೆಬಳಿ ಪ್ರವೇಶಿಸಿದೆ. ಉಡುಪಿ ಸಂಶೋಧಕರಾದ ಪ್ರೊ, ಎಸ್ ಎಂ, ಕೃಷ್ಣಯ್ಯ ಯವರಿಗೆ, ಈ ಹಕ್ಕಿಯ ಮೊಬೈಲ್ ಚಿತ್ರವನ್ನು ಸಂಗ್ರಹಿಸಿ ಕಳುಹಿಸಿಕೊಟ್ಟು ಮಾಹಿತಿ ಪಡೆಯುವಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಸಹಕರಿಸಿದ್ದಾರೆ.
Advertisement. Scroll to continue reading.

In this article:Diksoochi news, diksoochi Tv, diksoochi udupi, havanje, King fisher

Click to comment