ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ತಾಲ್ಲೂಕು ಆಗಿ 5 ವರ್ಷ ಆದರೂ ಇಲ್ಲಿವರೆಗೆ ತಾಲ್ಲೂಕಿನಲ್ಲಿ ಇರಲೇಬೇಕಾದ ಹೋಬಳಿ ರಚನೆ ಆಗದೇ ಇರುವುದರಿಂದ ಈಗಿನ ಹೆಬ್ರಿ ತಾಲ್ಲೂಕಿಗೆ ಸೇರಿದೆ ಕಾರ್ಕಳ ತಾಲ್ಲೂಕಿನ ಹದಿನಾರು ಗ್ರಾಮಗಳು ಅಜೆಕಾರು ನಾಡಕಚೇರಿಗೆ ಕುಂದಾಪುರದ 4 ಗ್ರಾಮಗಳು ಕುಂದಾಪ್ರ ನಾಡ ಕಚೇರಿಗೆ ಹೋಗಲೇಬೇಕಾದುದರಿಂದ ಜನರಿಗೆ ಸಕಾಲದಲ್ಲಿ ಸರ್ಕಾರಿ ಸೇವೆಗಳು ಲಭ್ಯವಾಗುತ್ತಿಲ್ಲ ಮತ್ತು ಉಪನೋಂದಾವಣೆ ಕಚೇರಿಗೂ ತಾಲ್ಲೂಕಿನ ಸಂಬಂಧಪಟ್ಟ ಎಲ್ಲಾ ಗ್ರಾಮಗಳು ಕೂಡ ಬೇರೆ ತಾಲ್ಲೂಕಿನ ಉಪನೋಂದಣಿ ಅಲೆದಾಡಬೇಕಾಗಿದೆ.
ಆದುದರಿಂದ ಇನ್ನೂ 1 ತಿಂಗಳ ಒಳಗೆ ಹೆಬ್ರಿಯಲ್ಲಿ ಹೋಬಳಿ ಮತ್ತು ಉಪ ನೋಂದಣಿ ಕಚೇರಿ ಪ್ರಾರಂಭವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಶನಿವಾರ ಹೆಬ್ರಿಯ ಅನಂತಪದ್ಮನಾಭ ಸನ್ನಿಧಿಯಲ್ಲಿ ನಡೆದ ಹೆಬ್ರಿಯ ವಿವಿಧ ಸಂಘಟನೆಗಳು ಕರೆದ ಪ್ರತಿಕಾಗೋಷ್ಠಿಯಲ್ಲಿ ಪ್ರಗತಿಪರ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದರು.

ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಹೋರಾಟ ಸಮಿತಿಯ ಎಚ್. ಭಾಸ್ಕರ ಜೋಯಿಸ್ , ಭಾರತೀಯ ಕಿಸಾನ್ ಸಂಘದ ಎಚ್. ರಾಜೀವ ಶೆಟ್ಟಿ , ಗುಳ್ಕಾಡು ಭಾಸ್ಕರ ಶೆಟ್ಟಿ ಸ್ಥಳೀಯ ಮುಖಂಡರಾದ ಸಂಜೀವ ನಾಯ್ಕ ಹಾಗೂ ವಿವಿಧ ಸಂಘಟನೆ ಪ್ರಮುಖರು ಮತ್ತಿತರರು ಉಪಸ್ಥಿತರಿದ್ದರು.