ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಹೆಬ್ರಿ ತಾಲ್ಲೂಕು ಕಚೇರಿಯ ಕಟ್ಟಡ ಆಡಳಿತ ಸೌಧ ಉದ್ಘಾಟನೆಯಾಗುತ್ತಿರುವುದು ಅಭಿನಂದನಿಯ. ಆದರೆ ಹೆಬ್ರಿ ತಾಲ್ಲೂಕಿಗೆ ಹೋರಾಡಿದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರನ್ನು ಸಭೆಗೆ ಆಹ್ವಾನಿಸದೇ ಕಡೆಗಣನೆ ಮಾಡಿದ್ದು ಸರಿಯಲ್ಲ, ಗೋಪಾಲ ಭಂಡಾರಿಯವರನ್ನು ನೆನಪಿಸದಿರುವುದು ನಮಗೆ ಅತ್ಯಂತ ನೋವಾಗಿದೆ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಎಣ್ಣೆಹೊಳೆ ಯೋಜನೆ ಯಾರಿಗಾಗಿ :

ಎಣ್ಣೆಹೊಳೆಯ ೧೦೮ ಕೋಟಿ ರೂಪಾಯಿ ವೆಚ್ಚದ ಏತ ನೀರಾವರಿ ಯೋಜನೆಗಾಗಿ ಯಾರಿಗಾಗಿ, ಎನ್ನುವುದನ್ನು ಮುಖ್ಯಮಂತ್ರಿಯವರು ಸ್ಪಷ್ಟಪಡಿಸಬೇಕು, ಎಣ್ಣೆಹೊಳೆ ಯೋಜನೆಯಿಂದ ಯಾರಿಗೂ ಪ್ರಯೋಜನವಿಲ್ಲ. ರೈತರಿಗೋ, ಜನತೆಗೋ, ಕುಡಿಯುವ ನೀರಿಗೋ, ಗುತ್ತಿಗೆದಾರಿಗೋ ಯಾರಿಗೇ ಲಾಭ ತಿಳಿಸಿ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದ್ದಾರೆ.ಎಣ್ಣೆಹೊಳೆ ಯೋಜನೆಯು ಎತ್ತರದ ಜಾಗದಲ್ಲಿ ಆಗಬೇಕಿದೆ. ಪೇಟೆಯಲ್ಲಿ ಮಾಡಿದ್ದರಿಂದ ಹಲವ ಕುಟುಂಬಗಳಿಗೆ ಸಮಸ್ಯೆಯಿದೆ ಎಂದ ಮಂಜುನಾಥ ಪೂಜಾರಿ ಕ್ಷೇತ್ರದಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ, ಡೀಮ್ಡ್ ಫಾರೆಸ್ಟ್ ನಿಂದ ಮುಕ್ತಿಯೇ ಸಿಕ್ಕಿಲ್ಲ, ಜನತೆಗೆ ಹಕ್ಕುಪತ್ರ ಕೊಟ್ಟಿಲ್ಲ, ಉಡುಪಿ ಜಿಲ್ಲೆಗೆ ಸಮರ್ಥ ಉಸ್ತುವಾರಿ ಸಚಿವರಿಲ್ಲ ಇದಕ್ಕೆಲ್ಲ ಯಾರು ಹೊಣೆ ಎಂದು ಮಂಜುನಾಥ ಪೂಜಾರಿ ಪ್ರಶ್ನಿಸಿದರು.
ಹೆಬ್ರಿಯಲ್ಲಿ ಆಸ್ಪತ್ರೆ ಇದ್ದೂ ಇಲ್ಲದಂತಾಗಿದೆ :
ಹೆಬ್ರಿಯಲ್ಲಿ ಸರ್ಕಾರಿ ಆಸ್ಪತ್ರೆ ಇದ್ದೂ ಇಲ್ಲದ ಸ್ಥಿತಿ ಇದೆ.ತಜ್ಞ ವೈದ್ಯರಿಲ್ಲ. ತಾಂತ್ರಿಕ ವ್ಯವಸ್ಥೆ ಇಲ್ಲ, ತುರ್ತಾಗಿ ಸಮಸ್ಯೆ ಆದರೆ ಉಡುಪಿ ಮಣಿಪಾಲಕ್ಕೆ ಹೋಗಬೇಕಿದೆ ಎಂದು ಹೇಳಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ದಿನೇಶ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಪ್ರಮುಖರಾದ ಎಚ್.ಜನಾರ್ಧನ್, ಶೀನ ಪೂಜಾರಿ, ಶಶಿಕಲಾ ಪೂಜಾರಿ, ವಿಶುಕುಮಾರ್, ಹರೀಶ ಕುಲಾಲ್, ಶ್ರವಣ್ ಉಪಸ್ಥಿತರಿದ್ದರು.

