ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಹಳೇಸೋಮೇಶ್ವರ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಹೇರಳೆ (51) ತೀವ್ರ ಅನಾರೋಗ್ಯ ದಿಂದ ಮಂಗಳವಾರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಸೋಮೇಶ್ವರ ಹೆಬ್ರಿಯ ಪರಿಸರದಲ್ಲಿ ಖ್ಯಾತರಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ನಾಡ್ಪಾಲು ಹಳೇ ಸೋಮೇಶ್ವರ ಕಾಸನಮಕ್ಕಿಯವರಾದ ಲಕ್ಷ್ಮೀ ನಾರಾಯಣ ಹೇರಳೆ ಹೆಬ್ರಿಯ ಚಾರ ಮಹಿಷಮರ್ಧಿನಿ ದೇವಸ್ಥಾನದ ಸಮೀಪದಲ್ಲಿ ವಾಸವಿದ್ದರು.

ಮೃತರಿಗೆ ಪತ್ನಿ, ಒಬ್ಬರು ಪುತ್ರಿ ಒರ್ವ ಪುತ್ರ ಇದ್ದಾರೆ.
ಅಂತಿಮದರ್ಶನ : ಬೆಂಗಳೂರಿನ ಚಂದ್ರಶೇಖರ ಗುರೂಜಿ, ನಾಡ್ಪಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಹೆಗ್ಡೆ, ಕಾಂಗ್ರೆಸ್ ಮುಖಂಡ ನೀರೆ ಕೃಷ್ಣ ಶೆಟ್ಟಿ, ಧಾರ್ಮಿಕ ಮುಖಂಡ ಹೆಬ್ರಿ ಭಾಸ್ಕರ ಜೋಯಿಸ್, ಬೈಕಾಡಿ ಮಂಜುನಾಥ ರಾವ್ ಶಿವಪುರ, ಡಾ.ಗುರುಪ್ರಸಾದ್ ಕೊಡಂಚ, ಹೆಬ್ರಿ ರವಿ ರಾವ್ ಸಹಿತ ನೂರಾರು ಗಣ್ಯರು ಅಂತಿಮ ದರ್ಶನ ಪಡೆದರು.
ಹಳೇ ಸೋಮೇಶ್ವರದ ಲಕ್ಷ್ಮೀ ನಾರಾಯಣ ದೇವಸ್ಥಾನದ ಬಳಿಯ ತಮ್ಮ ಮೂಲಮನೆಯ ಜಾಗದಲ್ಲಿ ಅಂತ್ಯಸಂಸ್ಕಾರ ಬುಧವಾರ ನೆರವೇರಿತು.

