ಬೆಂಗಳೂರು : ಮಣಿಪಾಲ್ ಆಸ್ಪತ್ರೆಗೆ ಗಾಯಗೊಂಡು ಶಸ್ತ್ರ ಚಿಕಿತ್ಸೆಗಾಗಿ ದಾಖಲಾಗಿದ್ದಂತ ನಟ ದಿಗಂತ್ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಗೋವಾಕ್ಕೆ ಫ್ಯಾಮಿಲಿ ಜೊತೆಗೆ ತೆರಳಿದ್ದ ವೇಳೆ ಕುತ್ತಿಗೆಗೆ ಗಾಯವಾಗಿತ್ತು. ಅವರನ್ನು ಗೋವಾದಲ್ಲಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ದಾಖಲಿಸಲಾಗಿತ್ತು.
ಘಟನೆಯಲ್ಲಿ ನಟ ದಿಗಂತ್ ಅವರ ಸ್ಪೈನಲ್ ಕಾರ್ಡ್‌ಗೆ ಪೆಟ್ಟಾಗಿತ್ತು. ತಜ್ಞ ವೈದ್ಯರು ಬರೋಬ್ಬರಿ ಮೂರು ಗಂಟೆಗಳ ಕಾಲ ಆಪರೇಷನ್ ಮಾಡಿದ್ದರು. ಇದೀಗ ಆಪರೇಷನ್ ಯಶಸ್ವಿಯಾಗಿದ್ದು, ದಿಗಂತ್ ಆರೋಗ್ಯ ಸುಧಾರಿಸಿದೆ. ಹೀಗಾಗಿ ಅವರನ್ನು ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಇನ್ನು ಯಾವುದೇ ಶೂಟಿಂಗ್‌ಗೆ ಹೋಗದೇ, ಮೂರು ತಿಂಗಳು ಮನೆಯಲ್ಲೇ ರೆಸ್ಟ್ ಮಾಡುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement. Scroll to continue reading.
