ವರದಿ : ಬಿ.ಎಸ್. ಆಚಾರ್ಯ
ಉಡುಪಿ : ಜಗದ್ಗುರುಗಳವರ ಶುಭಕೃತ್ ಸಂವತ್ಸರದ ಚಾತುರ್ಮಾಸ್ಯವು 2022 ಜುಲೈ 13 ರಿಂದ ಸೆಪ್ಟಂಬರ್ 10ರ ತನಕ ಚಾತುರ್ಮಾಸ್ಯ ವ್ರತ ಆಚರಣೆ ಪಡುಕುತ್ಯಾರು ಆನೆಗುಂದಿ ಮಠದಲ್ಲಿ ನಡೆಯಲಿದೆ. ಇದರ ಪೂರ್ವಭಾವಿಯಾಗಿ ಜಗದ್ಗುರುಗಳವರ ಕ್ಷೇತ್ರ ಸಂದರ್ಶನ ದಲ್ಲಿ ಪ್ರತಿಷ್ಠಾನದ ವ್ಯಾಪ್ತಿಯ ದೇವಾಲಯಗಳ ಸಂದರ್ಶನವನ್ನು ಹಾಗೂ ಇನ್ನಿತರ ದೇವಾಲಯಗಳ ಕೋರಿಕೆ ಮೇರೆಗೆ ಇರುವ ಸಂದರ್ಶನವು 2022 ಜೂನ್ 12 ರಿಂದ ಆರಂಭಗೊಂಡಿದ್ದು ಜುಲೈ 8 ರ ತನಕ ನಡೆಯಲಿದೆ.
ಅನಿವಾರ್ಯ ಕಾರಣಗಳಿಂದ ಈ ಮೊದಲೇ ತಿಳಿಸಿದ ದಿನಾಂಕಗಳಿಗಿಂತ ಜುಲೈ1 ಮತ್ತು ಜುಲೈ 2ರ ಕಾರ್ಯಕ್ರಮದಲ್ಲಿ ವ್ಯತ್ಯಾಸವಾಗಿದೆ. ಸಂಬಂಧಪಟ್ಟ ದೇವಸ್ಥಾನಗಳ ಧರ್ಮದರ್ಶಿಗಳು ಸಹಕರಿಸಬೇಕಾಗಿ ವಿನಂತಿ ಎಂದು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ ಪಡುಕುತ್ಯಾರು. ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್ 20ರ ನಂತರದ ಸಂದರ್ಶನ ವಿವರಗಳು ಇಂತಿದೆ. (ಸಂದರ್ಶನದ ದಿನಾಂಕ, ದೇವಾಲಯಗಳು, ಆವರಣದಲ್ಲಿ ಸಮಯ, ಚಾತುರ್ಮಾಸ್ಯವ್ರತ ನಿರ್ವಹಣಾ ಸಮಿತಿಯ ಪದಾಧಿಕಾರಿಗಳು ಉಸ್ತುವಾರಿ )
- ಜೂನ್ 20 – ಗೋಕರ್ಣ (9) ಭಟ್ಕಳ (12)- ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಕಳಿ ಚಂದ್ರಯ್ಯ ಆಚಾರ್ಯ ಜೂನ್ 23 – ಕಟಪಾಡಿ (9), ಕಾಪು (12) – ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ರಾಘವೇಂದ್ರ ಆಚಾರ್ಯ ಉಡುಪಿ, ಕಾಡಬೆಟ್ಟು ನಾಗರಾಜ ಆಚಾರ್ಯ, ಸುರೇಶ ಆಚಾರ್ಯ ಇರಂದಾಡಿ ಜೂನ್ 24 – ಮೂಡಬಿದ್ರೆ (10), ಕಾರ್ಕಳ (12)- ಅರವಿಂದ ಆಚಾರ್ಯ ಬೆಳುವಾಯಿ, ಶಿಲ್ಪಿ ಸತೀಶ ಆಚಾರ್ಯ ಕಾರ್ಕಳ, ನಿಟ್ಟೆ ಸುರೇಶ ಆಚಾರ್ಯ ಜೂನ್ 26 – ಕಾಞಂಗಾಡು (8) ಮಧೂರು (10) ಕುಂಬಳೆ (11) , ಪ್ರತಾಪನಗರ (12) ಬಂಗ್ರಮಂಜೇಶ್ವರ (12.30 ) ಕೋಟೆಕಾರು (4)-ವೈ. ಧರ್ಮೇಂದ್ರ ಆಚಾರ್ಯ ಕಾಸರಗೋಡು, ಕೆ ಪ್ರಭಾಕರ ಆಚಾರ್ಯ ಕೋಟೆಕಾರು, ಕೆ ಎಂ ಗಂಗಾಧರ ಆಚಾರ್ಯ ಕೊಂಡೆವೂರು ಜೂನ್ 29- ಕೊಲಕಾಡಿ (10), ಪಡುಪಣಂಬೂರು (10.45), ಹಳೆಯಂಗಡಿ ( 11) ಮಂಗಳೂರು (12), ಬಿ ಸೂರ್ಯಕುಮಾರ್ ಆಚಾರ್ಯ ಹಳೆಯಂಗಡಿ, ಸುಂದರ ಆಚಾರ್ಯ ಬೆಳುವಾಯಿ *ಜುಲೈ 3 *ಪನ್ವೆಲ್* (10.00) ಮುಂಬೈ ಮೀರಾ ರೋಡ್ (5) , -ವಿ ಶ್ರೀಧರ ಆಚಾರ್ಯ ವಡೇರಹೋಬಳಿ, ತ್ರಾಸಿ ಸುಧಾಕರ ಆಚಾರ್ಯ ಜುಲೈ 5-* ಅಂಕೋಲಾ (11)-, ಭಾಸ್ಕರ ಬಿ ಆಚಾರ್ಯ ಭಟ್ಕಳ, ಮಧುಕರ ಚಂದ್ರಶೇಖರ ಆಚಾರ್ಯ ಹೊನ್ನಾವರ ಜುಲೈ 8 – ಉಪ್ರಳ್ಳಿ (10) ಬಾರ್ಕೂರು (12)- ತ್ರಾಸಿ ಸುಧಾಕರ ಆಚಾರ್ಯ ಜಗದ್ಗುರುಗಳವರು ತಮ್ಮ ದೇವಸ್ಥಾನಗಳಿಗೆ ಚಿತೈಸುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಶಿಷ್ಯವೃಂದದವರು ಆಗಮಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಕುಲಗುರುಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ವಿನಂತಿ ಮಾಡಲಾಗಿದೆ.