ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಆಟೋ ಹಾಗೂ ಖಾಸಗಿ ಸಾರಿಗೆ ನೌಕಕರ ಸಮಸ್ಯೆ ಪರಿಹಾರ ಮಾಡುವಂತೆ ಇಲ್ಲಿನ ತಾಲೂಕು ಆಟೋರಿಕ್ಷಾ ಮಜ್ದೋರ್ ಸಂಘ ಗುರುವಾರ ಶಾಸ್ತ್ರಿ ವೃತ್ತದದಿಂದ ಮೆರವಣಿಗೆ ಪ್ರತಿಭಟನೆ ನಡೆಸಿ, ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಖಾಸಗಿ ಸಾರಿಗೆ ನೌಕರರ ಹಿತರಕ್ಷಣೆಗಾಗಿ ಕಲ್ಯಾಣ ಮಂಡಳಿ ರಚನೆ, ಪಿಂಚಣಿ, ಇಎಸ್‍ಐ, ಪಿಎಫ್ ಸೌಲಭ್ಯ, ಚಾಲಕರಿಗೆ ಆಯುಷ್ಮಾನ್ ಭಾರತ್ ಜಾರಿ, ಇ ಶ್ರಮ ಗುರುತಿನ ಚೀಟಿ, ಬ್ಯಾಂಕ್ ಮೂಲಕ ವಿಮಾ, ನೈಸರ್ಗಿಕ ವಿಮಾ ಸೌಲಭ್ಯ ನೀಡುವಂತೆ ಸಂಘಟನೆ ಒತ್ತಾಯಿಸಿತು.

ವಾಹನ ವಿಮಾ ಮೊತ್ತದಲ್ಲಿ ಶೇ.50ರಷ್ಟು ಕಡಿತ ಮಾಡಿ ತಕ್ಷಣ ಜಾರಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಆಟೋ ಮಜ್ದೂರ್ ಸಂಘ ಗೌರವಾಧ್ಯಕ್ಷ ಸುರೇಶ್ ಪುತ್ರನ್, ಅಧ್ಯಕ್ಷ ಮಂಜುನಾಥ ಟಿಟಿ ರಸ್ತೆ, ಕಾರ್ಯದರ್ಶಿ ರವಿ ಪುತ್ರನ್, ಉಪಾಧ್ಯಕ್ಷರಾದ ಭಾಸ್ಕರ ಖಾರ್ವಿ ಬಸ್ರೂರು ಕೆರೆಕಟ್ಟೆ, ಆಶೋಕ್, ಕೋಶಾಧಿಕಾರಿ ಶ್ರೀಧರ ಮೊಗವೀರ, ಪುರಸಭೆ ಸದಸ್ಯ ಸಂತೋಷ ಶೆಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಪ್ರತಿಭಟನೆ ನೇತೃತ್ವ ವಹಿಸಿದ್ದರು.

