ಉತ್ತರ ಪ್ರದೇಶ: ಒಂದು ಆಟೋದಲ್ಲಿ ಸಾಮಾನ್ಯವಾಗಿ 3 ಮಂದಿ ಪ್ರಯಾಣಿಸಬಹುದು. ಹೆಚ್ಚು ಅಂದರೆ 4, 5 ಮಂದಿಯೂ ಅಡೆಸ್ಟ್ ಮಾಡ್ಕೋಬೋದು. ಆದ್ರೆ ಇಲ್ಲೊಂದು ಆಟೋದಲ್ಲಿ ಬರೋಬ್ಬರಿ 27 ಮಂದಿ ಪ್ರಯಾಣಿಸಿದ್ದಾರೆ. ಅದನ್ನು ಕಂಡ ಪೊಲೀಸರು ದಿಗ್ಭ್ರಮೆಗೊಂಡಿದ್ದಾರೆ.
ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿದ್ದು, ಅತಿವೇಗವಾಗಿ ಚಲಾಯಿಸುತ್ತಿದ್ದ ಆಟೋವನ್ನು ಕಂಡ ಪೊಲೀಸರು ತಡೆ ಹಿಡಿದಿದ್ದಾರೆ. ಆಟೋದಲ್ಲಿದ್ದವರನ್ನು ಕಂಡು ದಿಗ್ಭಾಂತರಾಗಿದ್ದಾರೆ.
ಆಟೋದಲ್ಲಿದ್ದವರನ್ನು ಕೆಳಗಿಳಿಸದ ಪೊಲೀಸರು ಹಿರಿಯರು ಮತ್ತು ಮಕ್ಕಳು ಸೇರಿದಂತೆ 27 ಮಂದಿಯನ್ನು ಕಂಡು ಶಾಕ್ ಆಗಿದ್ದಾರೆ. ಪೊಲೀಸರು ಪ್ರಯಾಣಿಕರನ್ನು ಒಬ್ಬೊಬ್ಬರಾಗಿ ಎಣಿಸುವ ವಿಡಿಯೋ ವೈರಲ್ ಆಗಿದೆ.

ಪೊಲೀಸರು ಸ್ಪೀಡ್ ಗನ್ ಅನ್ನು ಪರಿಶೀಲಿಸಿದಾಗ ಫತೇಪುರ್‌ನ ಬಿಂಡ್ಕಿ ಕೊಟ್ವಾಲಿ ಪ್ರದೇಶದ ಬಳಿ ಆಟೋ ಮೊದಲು ಪತ್ತೆಯಾಗಿದೆ. ಅತಿ ವೇಗದಿಂದ ಬಂದ ಆಟೋವನ್ನು ಪೊಲೀಸರು ಹಿಂಬಾಲಿಸಿ ನಿಲ್ಲಿಸಿದ್ದಾರೆ.
ಚಾಲಕ ಸೇರಿದಂತೆ ಎಲ್ಲರೂ ಇಕ್ಕಟ್ಟಿನಲ್ಲೇ ಪ್ರಯಾಣಿಸುವ ದೃಶ್ಯ ಕಂಡುಬಂದಿದೆ. ಸದ್ಯ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
