Connect with us

Hi, what are you looking for?

Diksoochi News

ರಾಷ್ಟ್ರೀಯ

ನೂತನ ಸಂಸತ್ ಭವನದ ಮೇಲೆ 6.5 ಮೀ ಎತ್ತರದ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ

2

ನವದೆಹಲಿ : ನೂತನ ಸಂಸತ್ ಭವನದ ಮೇಲ್ಛಾವಣಿಯ ಮೇಲೆ ನಿರ್ಮಿಸಲಾದ 6.5 ಮೀಟರ್ ಎತ್ತರದ ಕಂಚಿನ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭವನ್ನ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬೆಳಿಗ್ಗೆ ಅನಾವರಣಗೊಳಿಸಿದರು.

ಈ ಸಂದರ್ಭ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಈ ಕಾರ್ಯವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ ಉದ್ಯೋಗಿಗಳು ಉಪಸ್ಥಿತರಿದ್ದರು.

ಈ ಅಶೋಕ ಸ್ತಂಭವು 20 ಅಡಿಗಳಿಗಿಂತ ಹೆಚ್ಚು ಎತ್ತರವಿದೆ. ಕ್ರೇನ್ ಸಹಾಯದಿಂದ ಈ ಸ್ತಂಭವನ್ನು ಹೊಸ ಸಂಸತ್ ಕಟ್ಟಡದ ಮೇಲೆ ಸ್ಥಾಪಿಸಲಾಗಿದೆ.

Advertisement. Scroll to continue reading.

ಅಂದ್ಹಾಗೆ, ಮೋದಿ ಸರ್ಕಾರದ ಉಪಕ್ರಮದ ಮೇರೆಗೆ ದೆಹಲಿಯಲ್ಲಿ ಹೊಸ ಸಂಸತ್ ಭವನವನ್ನ ನಿರ್ಮಿಸಲಾಗುತ್ತಿದೆ. ಪ್ರಸ್ತುತ ಸಂಸತ್ ಭವನವು ಸುಮಾರು 93 ವರ್ಷಗಳಷ್ಟು ಹಳೆಯದಾಗಿದ್ದು, ಅನೇಕ ನ್ಯೂನತೆಗಳನ್ನು ಹೊಂದಿದೆ. ಹೊಸ ಸಂಸತ್ ಕಟ್ಟಡವು ಆಧುನಿಕ ಸೌಲಭ್ಯಗಳು ಮತ್ತು ಸುರಕ್ಷತಾ ಸಲಕರಣೆಗಳನ್ನು ಹೊಂದಿರಲಿದೆ. ಇಲ್ಲಿ ಏಕಕಾಲದಲ್ಲಿ 1,224 ಸದಸ್ಯರಿಗೆ ಅವಕಾಶವಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2020 ರ ಡಿಸೆಂಬರ್ 10 ರಂದು ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

Click to comment

Leave a Reply

Your email address will not be published. Required fields are marked *

You May Also Like

ರಾಷ್ಟ್ರೀಯ

0 ಅಯೋಧ್ಯೆ :  ಈ ಬಾರಿಯ ರಾಮನವಮಿ ಬಹಳ ವಿಶೇಷ. ಯಾಕೆಂದರೆ, ಇದೇ ಮೊದಲ ಬಾರಿಗೆ ಬಾಲರಾಮನ ಮೂರ್ತಿಯ ಹಣೆಯ ಮೇಲೆ ಸೂರ್ಯ ತಿಲಕವನ್ನು ಇಡಲಾಗುತ್ತದೆ. ಹಾಗಾಗಿ ಇಡೀ ಅಯೋಧ್ಯೆ ರಾಮನವಮಿ ಸಂಭ್ರಮ...

ಅರೆ ಹೌದಾ!

0 ನವದೆಹಲಿ: ಮೆಟ್ರೋ ರೈಲಿನಲ್ಲಿ ಬಿಕಿನಿ, ಅಶ್ಲೀಲ ಕೃತ್ಯಗಳಿಂದ ಕುಖ್ಯಾತವಾಗಿದ್ದ ದೆಹಲಿಯಲ್ಲಿ ಇದೀಗ ಮಹಿಳೆಯೊಬ್ಬರು ಬಿಕಿನಿ ತೊಟ್ಟು ಬಸ್‌ ಹತ್ತಿದ್ದು ಆಕೆಯ ವೇಷವನ್ನು ನೋಡಲಾಗದೆ ಸಹ ಪ್ರಯಾಣಿಕರು ಸೀಟು ಬಿಟ್ಟು ಹೋದ ಘಟನೆ ನಡೆದಿದೆ....

ರಾಷ್ಟ್ರೀಯ

0 ನವದೆಹಲಿ: ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಹೆಚ್ಚುವರಿ ಮತ ಬಿಜೆಪಿಗೆ ಬಿದ್ದಿರುವ ಹಿನ್ನಲೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ಹಿರಿಯ ವಕೀಲ...

ಅಂತಾರಾಷ್ಟ್ರೀಯ

1 ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಅದರ ಸುತ್ತಮುತ್ತಲಿನ ದೇಶಗಳಲ್ಲಿ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮರುಭೂಮಿಯ ಊರಾದ ಯುಎಇಯಲ್ಲಿ ಎಲ್ಲೆಂದರಲ್ಲಿ ನೀರು ಕಾಣುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರವಾಹದಿಂದಾಗಿ ಹಲವು ನಗರಗಳಿಗೆ...

ರಾಜ್ಯ

0 ಮಂಡ್ಯ: ಐಸ್ ಕ್ರೀಮ್ ಸೇವನೆ ಮಾಡಿದ ಬಳಿಕ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ವರದಿಯಾಗಿದೆ. ಗ್ರಾಮದ ಪ್ರಸನ್ನ ಮತ್ತು ಪೂಜಾ ದಂಪತಿಯ ಒಂದೂವರೆ ವರ್ಷದ ತ್ರಿಶೂಲ್...

error: Content is protected !!