ನವದೆಹಲಿ: ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕೇಂದ್ರ ಸರ್ಕಾರ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ಗಳ ದರದಲ್ಲಿ ಅಲ್ಪ ಇಳಿಸಿದೆ.
ಈ ದರ ಇಂದಿನಿಂದಲೇ ಜಾರಿಗೆ ಬರಲಿದ್ದು, ಇಂಡಿಯನ್ ಆಯಿಲ್ ಕಾರ್ಪೋರೇಷನ್ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ದರದಲ್ಲಿ 36 ರೂಪಾಯಿ ಕಡಿತ ಮಾಡಿದೆ. ಇದರಿಂದ 2012 ರೂಪಾಯಿ ಇದ್ದ ಸಿಲಿಂಡರ್ ಇದೀಗ 1976 ರೂಪಾಯಿಗೆ ಸಿಗಲಿದೆ.
36 ರೂಪಾಯಿ ಕಡಿತದೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆ 1976.50 ರೂ.ಗೆ ಆಗಿದೆ. ಈ ಹಿಂದೆ ಅದು 2012.50 ರೂ. ಇತ್ತು. ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆ 2095.50 ಇದ್ದು, ಈ ಹಿಂದೆ ಪ್ರತಿ ಸಿಲಿಂಡರ್ ಬೆಲೆ 2132 ರೂ. ಇತ್ತು. ಮುಂಬೈನಲ್ಲಿ 19 ಕೆಜಿ ತೂಕದ ಸಿಲಿಂಡರ್ 1936.50 ರೂ.ಗೆ ಸಿಗಲಿದೆ.
Advertisement. Scroll to continue reading.