ಚಾಮರಾಜನಗರ : ಚಲಿಸುತ್ತಿದ್ದಂತ ಕಾರಿನ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಸಂತೇಮರಹಳ್ಳಿ ಬಳಿಯಲ್ಲಿನ ಹೆಗ್ಗವಾಡಿ ಕ್ರಾಸ್ ಬಳಿಯಲ್ಲಿ ನಡೆದಿದೆ.
ಕುದೇರು ಕಡೆಯಿಂದ ಬರುತ್ತಿದ್ದ ಮಾರುತಿ ಓಮ್ನಿ ಕಾರಿನ ಮೇಲೆ ಆಲದ ಮರ ಉರುಳಿ ಬಿದ್ದಿದೆ. ಹೀಗಾಗಿ ಕಾರಿನಲ್ಲಿದ್ದಂತಹ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಹೊನ್ನೂರಿನ ಹೆಚ್.ಬಿ. ರಾಜು(49) ಮತ್ತು ಅವರ ಪುತ್ರ ಶರತ್(22) ಸಾವನ್ನಪ್ಪಿದವರು.
Advertisement. Scroll to continue reading.

ರಾಜು ಯಳಂದೂರಿನಲ್ಲಿ ಹೋಲ್ಸೇಲ್ ಅಂಗಡಿ ನಡೆಸುತ್ತಿದ್ದರು ಎನ್ನಲಾಗಿದೆ. ಮರ ಬಿದ್ದ ರಭಸಕ್ಕೆ ಓಮ್ನಿ ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಳೆದೆರಡು ದಿನದಿಂದ ಒಂದೇ ಸಮನೆ ಮಳೆಯಾಗುತ್ತಿದ್ದು ಮರ ನೀರಿಗೆ ನೆನೆದಿತ್ತು. ಹಳೆ ಮರವಾಗಿದ್ದರಿಂದ ಇಂದು ಬಿದ್ದುಹೋಗಿದೆ ಎನ್ನಲಾಗಿದೆ.
ಸಂತೇಮರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Advertisement. Scroll to continue reading.

In this article:accident, Diksoochi news, diksoochi Tv, diksoochi udupi, santhemarahalli

Click to comment