ಬಿಹಾರ: ಬೋಟ್ ನಲ್ಲಿದ್ದಂತ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ, ನಾಲ್ವರು ಸಾವನ್ನಪ್ಪಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಬಿಹಾರದ ಪಾಟ್ನಾದಲ್ಲಿನ ಮನೇರ್ ಗಂಗಾ ಘಾಟ್ ನಲ್ಲಿ ದೋಣಿಯಲ್ಲಿ 20ಕ್ಕೂ ಹೆಚ್ಚು ಜನರು ಸಾಗುತ್ತಿದ್ದರು ಎನ್ನಲಾಗಿದೆ.
ಈ ವೇಳೆ ಬೋಟ್‌ನಲ್ಲಿದ್ದಂತ ಸಿಲಿಂಡರ್ ಸ್ಪೋಟಗೊಂಡಿದೆ ಎನ್ನಲಾಗಿದೆ.
Advertisement. Scroll to continue reading.

ಬೋಟ್ ನಲ್ಲಿದ್ದಂತ 20 ಜನರಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ನದಿಯ ಮಧ್ಯೆ ಇದ್ದಾಗ ದೋಣಿಯಲ್ಲಿ ನಾವಿಕರೊಬ್ಬರು ಅಡುಗೆ ಮಾಡುತ್ತಿದ್ದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ನದಿಯಲ್ಲಿ ದೋಣಿ ಮುಳುಗಿಲ್ಲ. ಹೀಗಾಗಿ ಇತರ ನಾವಿಕರು ಅದನ್ನು ಮನೇರ್‌ನಲ್ಲಿ ಗಂಗಾ ನದಿಯ ದಡಕ್ಕೆ ತರುವಲ್ಲಿ ಯಶಸ್ವಿಯಾಗಿದ್ಧಾರೆ. ಮೃತ ದೇಹಗಳು ಮತ್ತು ಎಲ್ಲ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Advertisement. Scroll to continue reading.

In this article:boat, Diksoochi news, diksoochi Tv, diksoochi udupi, maner ganga ghat

Click to comment