ಮುಂಬೈ : ಶೇರು ಮಾರುಕಟ್ಟೆಯ ಅತೀ ದೊಡ್ಡ ಹೆಸರಾಗಿರುವ ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಭಾನುವಾರ ಬೆಳಿಗ್ಗೆ ನಿಧನರಾದರು.
ಅವರಿಗೆ 62 ವರ್ಷ ವಯಸ್ಸಾಗಿತ್ರು. ರಾಕೇಶ್ ಜುಂಜುನ್‌ವಾಲಾ ಅವರನ್ನು ಬೆಳಗ್ಗೆ 6.45ಕ್ಕೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆತರಲಾಯಿತು ಎಂದು ತಿಳಿದುಬಂದಿದೆ.
ಆರೋಗ್ಯ ಸಮಸ್ಯೆಗಳಿಂದ ಅವರು ಬಳಲುತ್ತಿದ್ದರು. ಕೆಲವು ವಾರಗಳ ಹಿಂದೆ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗಿತ್ತು ಎನ್ನಲಾಗಿದೆ. ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾಗಿದ್ದ ‘ಮನಿ ಮ್ಯಾಗ್ನೆಟ್’ ಎಂದು ಖ್ಯಾತರಾಗಿದ್ದ ಝುಂಜುನ್ವಾಲಾ ಅವರು ಹಂಗಾಮಾ ಮೀಡಿಯಾ ಮತ್ತು ಆಪ್ಟೆಕ್‌ನ ಅಧ್ಯಕ್ಷರಾಗಿದ್ದರು. ವೈಸ್ರಾಯ್ ಹೋಟೆಲ್ಸ್, ಕಾಂಕಾರ್ಡ್ ಬಯೋಟೆಕ್, ಪ್ರೊವೊಗ್ ಇಂಡಿಯಾ ಮತ್ತು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನ ನಿರ್ದೇಶಕರಾಗಿದ್ದರು.
ಮಾಜಿ ಜೆಟ್ ಏರ್ವೇಸ್ ಸಿಇಓ ದುಬೆ ಮತ್ತು ಇಂಡಿಗೋ ಮಾಜಿ ಮುಖ್ಯಸ್ಥ ಆದಿತ್ಯ ಘೋಷ್ ಅವರೊಂದಿಗೆ ಸೇರಿ ಇತ್ತಿಚೇಗಷ್ಟೇ ಆಕಾಶ ಏರ್ಲೈನ್ಸ್ನ್ನು ಆರಂಭಿಸಿದ್ದರು.

