Connect with us

Hi, what are you looking for?

Diksoochi News

ಸಿನಿಮಾ

ವೂಟ್ ಸೆಲೆಕ್ಟ್‌ನಲ್ಲಿ ವೀಕ್ಷಿಸಿ ‘ಸಕುಟುಂಬ ಸಮೇತ’
ವಿಶೇಷ ವರ್ಲ್ಡ್ ಡಿಜಿಟಲ್ ಪ್ರೀಮಿಯರ್

1

ಬೆಂಗಳೂರು : ವೂಟ್ ಸೆಲೆಕ್ಟ್ (Voot Select) ಬಹು ನಿರೀಕ್ಷಿತ ಕನ್ನಡ ಕೌಟುಂಬಿಕ ಚಿತ್ರ ‘ಸಕುಟುಂಬ ಸಮೇತ’ದ ಎಕ್ಸ್ಕ್ಲೂಸಿವ್ ವರ್ಲ್ಡ್ ಡಿಜಿಟಲ್ ಪ್ರೀಮಿಯರ್ ಅನ್ನು ಸ್ಟ್ರೀಮ್ ಮಾಡುತ್ತಿದೆ. ಪರಮವಾಹ್ ಸ್ಟುಡಿಯೋಸ್ ಅಡಿಯಲ್ಲಿ ರಕ್ಷಿತ್ ಶೆಟ್ಟಿ ನಿರ್ಮಿಸಿದ ಮತ್ತು ರಾಹುಲ್ ಪಿ.ಕೆ. ಬರೆದು ನಿರ್ದೇಶಿಸಿದ ಈ ಚಲನಚಿತ್ರವು ಭ್ರಾತೃತ್ವದ ಸಂದೇಶವನ್ನು ಶ್ರೇಷ್ಠ ರೀತಿಯಲ್ಲಿ ಸಾರುತ್ತಿದೆ. ‘ಸಕುಟುಂಬ ಸಮೇತ’ದಲ್ಲಿ ಭರತ್ ಜಿ.ಬಿ., ಅಚ್ಯುತ್ ಕುಮಾರ್, ಪುಷ್ಪಾ ಬೆಳವಾಡಿ, ಕೃಷ್ಣ ಹೆಬ್ಬಾಳೆ ಮತ್ತು ಸಿರಿ ರವಿಕುಮಾರ್ ಪ್ರಧಾನ ಭೂಮಿಕೆಯಲ್ಲಿದ್ದಾರೆ.

ಹಾಸ್ಯಮಯ ಚಿತ್ರವಾಗಿರುವ ‘ಸಕುಟುಂಬ ಸಮೇತ’ ಸಂಬಂಧದ ಸಂಕೀರ‍್ಣತೆಗಳನ್ನೂ ಅಷ್ಟೇ ಹೃದ್ಯವಾಗಿ ಕಟ್ಟಿಕೊಟ್ಟಿದೆ. ಪ್ರತಿ ಮನೆಯಲ್ಲೂ ಇರಬಹುದಾದ ಪಾತ್ರಗಳು, ಸಂಭವಿಸಬಹುದಾದ ಸನ್ನಿವೇಶಗಳ ಮೂಲಕ ಕಥೆಯು ಕೌಟುಂಬಿಕ ಸಂಬಂಧಗಳ ಸೊಗಸನ್ನು ಸಾರುತ್ತದೆ.

ಮದುವೆಯಾಗಲು ತವಕಿಸುತ್ತಿರುವ ಸೂರಿಯ ಬದುಕಿನಲ್ಲಿ ಶ್ರದ್ಧಾ ಎಂಬ ಹುಡುಗಿಯ ಪ್ರವೇಶವಾಗುತ್ತದೆ. ಆದರೆ, ಮದುವೆಗೆ ಇನ್ನು ಒಂದು ವಾರ ಇದೆ ಎನ್ನುವಾಗ ಆಕೆ ನಿರಾಕರಿಸುತ್ತಾಳೆ. ಎರಡು ನಿಷ್ಕ್ರಿಯ ಕುಟುಂಬಗಳ ನಡುವೆ ಸಮನ್ವಯಕ್ಕಾಗಿ ಸಭೆ ನಡೆಯುತ್ತದೆ. ಅಲ್ಲಿ ಈಗೋ ಘಾಸಿಗೊಳ್ಳುತ್ತವೆ. ಹೃದಯಗಳು ಮುರಿದು ಹೋಗುತ್ತವೆ. ಈ ನಡುವೆಯೇ ಕೆಲವು ಹೃದಯಗಳ ಗಾಯವೂ ಮಾಯುತ್ತದೆ. ಸುಖಾಂತ್ಯದ ರೋಮ್ಯಾಂಟಿಕ್ ಕಾಮಿಡಿಗಾಗಿ ವೀಕ್ಷಿಸಿ – ವೂಟ್ ಸೆಲೆಕ್ಟ್ (Voot Select).

Advertisement. Scroll to continue reading.

ಚಿತ್ರದ ಕುರಿತು ಮಾತನಾಡಿದ ನಟ ಮತ್ತು ನಿರ್ಮಾಪಕ ರಕ್ಷಿತ್ ಶೆಟ್ಟಿ, “ಸಕುಟುಂಬ ಸಮೇತ ಸರಳವಾದ ಚಿತ್ರವಾಗಿದ್ದು, ಕೊನೆಯವರೆಗೂ ನಿಮ್ಮನ್ನು ನಗಿಸುತ್ತದೆ. ಲಾಕ್ಡೌನ್ ಸಮಯದಲ್ಲಿ ಈ ಪರಿಕಲ್ಪನೆ ಹುಟ್ಟಿಕೊಂಡಿತು. ಪ್ರತಿ ಪಾತ್ರವೂ ಎಷ್ಟು ಸಾಪೇಕ್ಷ ಮತ್ತು ನೈಜವಾಗಿದೆ ಎಂಬ ಅಂಶವೇ ಪ್ರೇಕ್ಷಕರನ್ನು ಬಹುವಾಗಿ ಕಾಡುತ್ತದೆ. ಏಕೆಂದರೆ, ಅಂತಹ ಪಾತ್ರಗಳು ನಮ್ಮ ಸುತ್ತಮುತ್ತ ಸಾಕಷ್ಟಿವೆ.

ನಿರ್ದೇಶಕ ರಾಹುಲ್ ಪಿ.ಕೆ. ಮಾತನಾಡಿ, “ಸಕುಟುಂಬ ಸಮೇತ ಮದುವೆ ಮತ್ತು ಕುಟುಂಬದ ಕುರಿತು ನನ್ನ ವೈಯಕ್ತಿಕ ದೃಷ್ಟಿಕೋನವಾಗಿದೆ. ಸಂಬಂಧಗಳು ಹೇಗೆ ನಿರಂತರ ಬೆಳೆಯುತ್ತಿರುತ್ತವೆ ಮತ್ತು ಬದಲಾಗುತ್ತಿರುತ್ತವೆ ಎಂಬ ಕುರಿತು ಸಂವಾದ ನಡೆಸಲು ನಾನು ಪ್ರಯತ್ನಿಸುತ್ತಿದ್ದೇನೆ” ಎಂದು ಹೇಳಿದರು.

ಸಕುಟುಂಬ ಸಮೇತವನ್ನು ವೀಕ್ಷಿಸಿ, ಇದೀಗ ವೂಟ್ ಸೆಲೆಕ್ಟ್ ನಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತಿದೆ!

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಮಂಗಳೂರು : ನಾಲ್ಕೂವರೆ ತಿಂಗಳ ಹಸುಗೂಸನ್ನು ಸಾಯಿಸಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಗುಜ್ಜರಕೆರೆಯಲ್ಲಿ ನಡೆದಿದೆ. ನಾಲ್ಕೂವರೆ ತಿಂಗಳ ಮಗು ಅಬ್ದುಲ್ಲಾ ಹೂದ್ ಮತ್ತು ತಾಯಿ ಫಾತಿಮಾ ರುಕಿಯಾ(23) ಮೃತಪಟ್ಟವರು....

ರಾಷ್ಟ್ರೀಯ

1 ಲಕ್ನೋ: ಸರ್ಕಾರಿ ಶಾಲೆ ಶಿಕ್ಷಕ ಹಾಗೂ ಅವರ ಮಗ ತಾವು ಮನೆಯಲ್ಲಿ ಸಾಕಿದ್ದ ಬೆಕ್ಕು ಕಚ್ಚಿದ ಪರಿಣಾಮ ಸಾವಿಗೀಡಾದ ಘಟನೆ ನಡೆದಿದೆ. ಉತ್ತರಪ್ರದೇಶದ ಖಾನ್‌ಪುರ್‌ ದೆಹತ್ ಜಿಲ್ಲೆಯ ಅಕ್ಬರ್‌ಪುರ ನಗರದಲ್ಲಿ ಈ...

ಜ್ಯೋತಿಷ್ಯ

1 ದಿನಾಂಕ : ೦೪-೧೨-೨೩, ವಾರ: ಭಾನುವಾರ, ನಕ್ಷತ್ರ : ಆಶ್ಲೇಷಾ, ತಿಥಿ : ಷಷ್ಠಿ ವಿವಾಹೇತರ ಸಂಬಂಧಗಳಿಂದ ಅಂತರ ಕಾಯ್ದುಕೊಳ್ಳಬೇಕು. ನೀವು ಸಂಬಂಧಿಕರನ್ನು ಹೆಚ್ಚು ನಂಬಬಾರದು. ನಿಮ್ಮ ಆರೋಗ್ಯದ ಬಗ್ಗೆ ಸ್ವಲ್ಪ...

ರಾಷ್ಟ್ರೀಯ

0 ಛತ್ತೀಸ್‌ಗಢ : ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಇದು ಅಚ್ಚರಿಯ ಗೆಲುವಾಗಿದ್ದರೆ, ಮತ್ತೊಂದೆಡೆ ಸೇಡಿನ ಗೆಲುವೊಂದು ಈ ಕ್ಷೇತ್ರದಲ್ಲಿ ಹುಬ್ಬೇರಿಸುವಂತೆ ಮಾಡಿದೆ. ತನ್ನ ಮಗನ ಸಾವಿನ ವಿರುದ್ಧ ಸೇಡು...

ರಾಷ್ಟ್ರೀಯ

2 ಚೆನ್ನೈ : ಚೆನ್ನೈನಿಂದ ಕೊಯಮತ್ತೂರು ಕಡೆಗೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿ 20 ಮಂದಿ ಗಾಯಗೊಂಡಿದ್ದು, ಒಬ್ಬ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ಕನ್ಯಾಕುಮಾರಿ ನಿವಾಸಿ ಮಣಿಕಂದನ್ ಎಂದು ಗುರುತಿಸಲಾಗಿದೆ. 45...

error: Content is protected !!