ಚೇರ್ಕಾಡಿ ಮುಡ್ಕಿನಜೆಡ್ಡು ಅಂಗನವಾಡಿ ಶಾಲೆಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಪರಿಸರ ಸ್ವಚ್ಚತೆ; ಗೋಶಾಲೆಗೆ ಮೇವು ವಿತರಣೆ
Published
0
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಚೇರ್ಕಾಡಿ ಮುಡ್ಕಿನಜೆಡ್ಡು ಅಂಗನವಾಡಿ ಶಾಲೆಯ ಬಳಿ ಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯ ನಡೆಯಿತು.
ಅಂಗನವಾಡಿ ಶಾಲೆಯ ಬಳಿ ಮತ್ತು ಆರ್ ಕೆ ಪಾಟ್ಕರ್ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಇರುವ ಗಿಡಗಂಟಿಗಳನ್ನು ಅಂಗನವಾಡಿ ಶಾಲಾ ಸ್ತ್ರೀ ಶಕ್ತಿ ಸಂಘದ ಸದಸ್ಯೆಯರು ಇನ್ನಿತರರು ಸೇರಿ ಸ್ವಚ್ಛತಾ ಕಾರ್ಯ ಮಾಡಿದರು.
Advertisement. Scroll to continue reading.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಚಂದ್ರ ಶೇಖರಪ್ಪ , ಶಿಕ್ಷಕಿ ಮುಕ್ತಾ, ನಿವೃತ್ತ ಮುಖ್ಯೋಪಧ್ಯಾಯ ಶರಶ್ಚಂದ್ರ , ಅಂಗನವಾಡಿ ಕಾರ್ಯಕರ್ತೆ ಶೋಭಾ ಆಚಾರ್ಯ, ಸಹಾಯಕಿ ಕುಸುಮ ಸ್ವಚ್ಛತಾ ಕಾರ್ಯದಲ್ಲಿದ್ದರು.