ಉಡುಪಿ: ನೇಣು ಬಿಗಿದು ವೃದ್ದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೈಲೂರಿನಲ್ಲಿ ನಡೆದಿದೆ.
ಕಾವೇರಿ(77) ಆತ್ಮಹತ್ಯೆ ಮಾಡಿಕೊಂಡವರು.
ಕಾವೇರಿ ಅವರು ಅಧಿಕ ರಕ್ತದ ಒತ್ತಡ ಮತ್ತು ಕಾಲಿನ ಪಾದದ ನೋವಿನಿಂದ ಬಳಲುತ್ತಿದ್ದು ಈ ಬಗ್ಗೆ ವೈದ್ಯರಿಂದ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಭಾನುವಾರ ಸಂಜೆ ಬಾತ್‌ರೂಮ್ ಗೆ ಹೋಗುವ ಪ್ಯಾಸೇಜ್ ಮೇಲಿರುವ ಕಬ್ಬಿಣದ ಕೊಕ್ಕೆಗೆ ನೈಲಾನ್ ಹಗ್ಗದ ಒಂದು ತುಂಡನ್ನು ಕುತ್ತಿಗೆಗೆ ನೇಣಾಗಿ ಬಿಗಿದು ಇನ್ನೊಂದು ತುದಿಯನ್ನು ಕಬ್ಬಿಣದ ಕೊಕ್ಕೆಗೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಅವರ ಪುತ್ರ ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement. Scroll to continue reading.