ಗದಗ: ರೈಲಿನಡಿ ಸಿಲುಕಿ ಮೊಸಳೆ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯಲ್ಲಿ ಸೋಮವಾರ ವರದಿಯಾಗಿದೆ.
ಹಳೇ ಆಲೂರು ಗ್ರಾಮದಲ್ಲಿ ಘಟನೆ ಸಂಭವಿಸಿದೆ.
ಅಧಿಕಾರಿಗಳ ಪ್ರಕಾರ, ಮೊಸಳೆ ಮಲಪ್ರಭಾ ನದಿಯಿಂದ ಹೊರಬಂದು ಹಳಿ ದಾಟುವಾಗ ರೈಲಿಗೆ ಸಿಲುಕಿದೆ. ಎಂಟು ಅಡಿ ಉದ್ದದ ಮೊಸಳೆ ಎರಡು ತುಂಡುಗಳಾಗಿದೆ.
Advertisement. Scroll to continue reading.
ಇದನ್ನು ಗಮನಿಸಿದ ಸ್ಥಳೀಯರು ಮೊಸಳೆಯ ಮೃತದೇಹವನ್ನು ಹಳಿಯಿಂದ ಹೊರತೆಗೆದಿದ್ದಾರೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸತ್ತ ಮೊಸಳೆ ದೇಹವನ್ನು ವಿಲೇವಾರಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.