Connect with us

Hi, what are you looking for?

ಸಿನಿಮಾ

ಬಿಗ್ ಬಾಸ್ ಒಟಿಟಿ ಕನ್ನಡ: ಮನೆಯಲ್ಲಿ ಆರ್ಯವರ್ಧನ್ ‘ಗುರುಗಳ’ದ್ದೇ ಮನರಂಜನೆಯ ಹವಾ!

0

ಬಿಗ್ ಬಾಸ್ ಒಟಿಟಿ ಕನ್ನಡದ ಮೊದಲ ಸೀಸನ್ ನಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳು ಪ್ರೇಕ್ಷಕರಿಗೆ ಸಾಕಷ್ಟು ಮನರಂಜನೆಯನ್ನು ಒದಗಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯಲ್ಲಿ ಚಾಕಚಕ್ಯತೆಗಳನ್ನು ಮತ್ತು ವ್ಯಕ್ತಿತ್ವಗಳನ್ನು ಪ್ರದರ್ಶಿಸುವ ಮೂಲಕ ಆಟದ ಮೋಡಿಗೆ ನಿರ್ವಿವಾದವಾಗಿ ಮನರಂಜನೆಯನ್ನು ಸೇರಿಸಿದ್ದಾರೆ. ಸಂಖ್ಯಾಶಾಸ್ತ್ರ ಪ್ರವೀಣರಾಗಿರುವ ಆರ್ಯವರ್ಧನ್ ಮತ್ತು ಅವರ ನಡವಳಿಕೆಗಳು ಮನೆಯಲ್ಲಿರುವ ಇತರ ಸ್ಪರ್ಧಿಗಳು ಮತ್ತು ಪ್ರೇಕ್ಷಕರನ್ನು ರಂಜಿಸಿದ್ದಾರೆ. ಬಿಗ್ ಬಾಸ್ ಒಟಿಟಿ ಕನ್ನಡದ ಮೊದಲ ಸೀಸನ್ ಫೈನಲ್ ಹಂತಕ್ಕೆ ಸಮೀಪಿಸುತ್ತಿರುವಾಗ ಆರ್ಯವರ್ಧನ್ ವಿವಿಧ ರೀತಿಯಲ್ಲಿ ಗಮನ ಸೆಳೆಯುತ್ತಿದ್ದಾರೆ. ಆ ಕೆಲವು ಕ್ಷಣಗಳನ್ನು ಇಲ್ಲಿ ನೋಡೋಣ:-

ಬೇವಾಚ್ ಅವತಾರ!
ವಿನೋದದ ಕ್ಷಣಗಳು ಮತ್ತು ಮನೆಯನ್ನು ಸದಾ ನಗೆಗಡಲಲ್ಲಿ ತೇಲುವಂತೆ ಮಾಡುವ ವಿಚಾರದಲ್ಲಿ ಆರ್ಯವರ್ಧನ್ ಯಾವುದೇ ಹಮ್ಮು ಬಿಮ್ಮು ಇಲ್ಲದೇ ಮನರಂಜನೆಯಲ್ಲಿ ತೊಡಗುತ್ತಾರೆ. ಎಲ್ಲಾ ಪ್ರತಿಬಂಧಗಳನ್ನು ಮೀರಿದ ಆರ್ಯವರ್ಧನ್ ಪ್ರತಿಸ್ಪರ್ಧಿಗಳಿಗಿಂತ ಮೊದಲೇ ಈಜುಕೊಳಕ್ಕೆ ಧುಮುಕಿ ಫಾಲೋಮೀ ಎನ್ನುವ ರೀತಿಯಲ್ಲಿ ಮನರಂಜಿಸಿದರು.

ಆರ್ಯವರ್ಧನ್ ಅವರ ಹೊಸ ಲುಕ್!
ಆರ್ಯವರ್ಧನ್ ಅವರ ಮೊದಲ ಮತ್ತು ನಂತರದ ನೋಟವು ಸಾಕಷ್ಟು ಚರ್ಚೆಯಾಗಿದೆ. ಅವರ ಸ್ಟೈಲ್ ನಲ್ಲಿ ಬದಲಾವಣೆ ತರಲು ಇತರೆ ಸ್ಪರ್ಧಿಗಳು ಬಯಸಿದ ಸಂದರ್ಭದಲ್ಲಿಯೇ ಆರ್ಯವರ್ಧನ್ ಎಲ್ಲಾ ಬಗೆಯ ಆಟದಲ್ಲಿ ಭಾಗಿಯಾದರು. ಗಡ್ಡವನ್ನು ಸಂಪೂರ್ಣ ತೆಗೆದುಹಾಕುವವರೆಗೆ ಅವರು ತಮ್ಮ ಹೊಸ ನೋಟವನ್ನು ಇಷ್ಟಪಡುತ್ತಾರೆ ಎಂಬಂತೆ ಕಾಣಿಸಿಕೊಂಡರು. ಅವರು ಸ್ಪರ್ಧಿಗಳನ್ನು ತಮ್ಮ ನೋಟದಿಂದ ಹೇಗೆ ಆಟವಾಡಲು ಬಿಡುತ್ತಾರೆ ಮತ್ತು ಯಾವುದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂಬುದು ಕುತೂಹಲವಾಗಿಯೇ ಉಳಿದಿದೆ.

ಆರ್ಯವರ್ಧನ್, ಫಿಟ್ನೆಸ್ ಉತ್ಸಾಹಿ
ಕೆಲವು ವಾರಗಳ ಹಿಂದೆ, ಆರ್ಯವರ್ಧನ್ ಈ ಶೋ ಮುಗಿಯುವುದರೊಳಗಾಗಿ ನನ್ನ ಹೊಟ್ಟೆಯನ್ನು ಕರಗಿಸುವುದಾಗಿ ಇತರೆ ಸ್ಪರ್ಧಿಗಳ ಬಳಿ ಸವಾಲು ಹಾಕಿದ್ದರು. ಈ ಸೀಸನ್ ಅಂತ್ಯದ ವೇಳೆಗೆ ಅವರು ಸಿಕ್ಸ್ ಪ್ಯಾಕ್ ಹೊಂದುತ್ತಾರೆ ಎಂದು ಹೇಳುವ ಮೂಲಕ ಅವರ ವಿನೋದದಿಂದ ಕೂಡಿದ ವಿಡಿಯೋವನ್ನು ವೀಕ್ಷಿಸುವ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಲು ಕಾರಣವಾಯಿತು.

Advertisement. Scroll to continue reading.

ಜಯಶ್ರೀಯಿಂದ ಮೇಕ್ ಓವರ್ ಪಡೆದ ಆರ್ಯವರ್ಧನ್
ಬಿಗ್ ಬಾಸ್ ಕನ್ನಡ ಒಟಿಟಿ ಮನೆಯೊಳಗೆ ಲಾಕ್ ಆಗಿರುವುದು ಎಲ್ಲಾ ಸ್ಪರ್ಧಿಗಳಲ್ಲಿ ಚಮತ್ಕಾರವನ್ನು ಉಂಟುಮಾಡಿದೆ. ಜಯಶ್ರೀಯಿಂದ ಆರ್ಯವರ್ಧನ್ ಮೇಕ್ ಓವರ್ ಪಡೆಯುತ್ತಿರುವುದು ತಮಾಷೆಯ ದೃಶ್ಯಗಳಲ್ಲಿ ಒಂದಾಗಿದೆ. ಆರ್ಯವರ್ಧನ್ ಜಯಶ್ರೀಯವರ ಮೇಕಪ್ ಕೌಶಲ್ಯಗಳನ್ನು ಬಳಸಲು ಅವಕಾಶ ಮಾಡಿಕೊಟ್ಟರು ಮತ್ತು ಆ ಕ್ಷಣವನ್ನು ಆನಂದಿಸಿದರು. ನಮ್ಮ ಪ್ರೀತಿಯ `ಗುರೂಜಿ’ಯನ್ನು ಹಿಂದೆಂದೂ ನೋಡದ ಸ್ಟೈಲ್ ನಲ್ಲಿ ನೋಡುವುದು ನಿಜಕ್ಕೂ ಸೋಜಿಗದ ಸಂಗತಿ. ಇದುವೇ ಚಿನ್ನ!

ಬಿಬಿ ಒಟಿಟಿ ಹೌಸ್ ನ ಮಾಸ್ಟರ್ ಚೆಫ್
ಆರ್ಯವರ್ಧನ್ ಅವರು ತಾವೊಬ್ಬ ಪಾಕಪ್ರವೀಣರೆಂಬುದನ್ನು ಮನೆಯಲ್ಲಿ ತೋರಿಸಿಕೊಟ್ಟರು. ಅವರ ಪಾಕಶಾಲೆಯ ಕೌಶಲ್ಯವನ್ನು ಮನೆಯವರು ಇಷ್ಟಪಟ್ಟಿದ್ದಾರೆ. ಏಕೆಂದರೆ, ಅವರು ಮಾಡುವ ವಡೆಗಳು, ಪಾಯಸ, ಸರಳ ವಿಧಾನದಲ್ಲಿ ಮಾಡುವ ಅನ್ನ ಮತ್ತು ಸಾಂಬಾರ್ ನಂತಹ ಖಾದ್ಯಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಅವರು `ಯಾವಾಗಲೂ ಪ್ರೀತಿಯಿಂದ ಅಡುಗೆ ಮಾಡು’ ಎಂಬ ತತ್ತ್ವವನ್ನು ಅನುಸರಿಸುತ್ತಿರುವುದರಿಂದ ಉತ್ತಮ ಪಾಕಪ್ರವೀಣರಾಗಲು ಸಾಧ್ಯವಾಗಿದೆ.

ಸಹ ಸ್ಪರ್ಧಿಗಳಿಂದ `ಗುರುಗಳೇ’ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಆರ್ಯವರ್ಧನ್ ಬಹುತೇಕ ಎಲ್ಲಾ ಸ್ಪರ್ಧೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಮತ್ತು ಪ್ರದರ್ಶನದಲ್ಲಿ ಮನರಂಜನೆಯನ್ನು ನೀಡುತ್ತಾ ಬಂದಿದ್ದಾರೆ. ವೂಟ್ ಸೆಲೆಕ್ಟ್ ನಲ್ಲಿ ಪ್ರತ್ಯೇಕವಾಗಿ ಸ್ಟ್ರೀಮಿಂಗ್ ಮಾಡಲಾಗುತ್ತಿರುವ ಬಹು ನಿರೀಕ್ಷಿತ ಗ್ರ್ಯಾಂಡ್ ಫಿನಾಲೆಯನ್ನು ವೀಕ್ಷಿಸಲು ವೂಟ್ ಸೆಲೆಕ್ಟ್ ಗೆ ಟ್ಯೂನ್ ಮಾಡಿ.


Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!