Connect with us

Hi, what are you looking for?

ಸಿನಿಮಾ

ಬಿಗ್ ಬಾಸ್ ಒಟಿಟಿ ಫಿನಾಲೆ:
ವಿಜೇತರನ್ನು ಊಹಿಸಿದ ಮಾಜಿ ಸ್ಪರ್ಧಿಗಳು

1

ಬೆಂಗಳೂರು: ಬಿಗ್ ಬಾಸ್ ಕನ್ನಡದ ಮೊದಲ OTT ಸೀಸನ್ ತನ್ನ ಮಹತ್ವದ ಪ್ರಯಾಣದ ಅಂತಿಮ ಹಂತದಲ್ಲಿದೆ. ರೋಮಾಂಚನಕಾರಿ ಫೈನಲ್‌ ವೀಕ್ಷಿಸಲು ಪ್ರೇಕ್ಷಕರು ಸಜ್ಜಾಗುತ್ತಿದ್ದಂತೆ, ಪ್ರದರ್ಶನದ ಈ ಮೊದಲಿನ ಕೆಲವು ಸ್ಪರ್ಧಿಗಳು ಈ ಕಾರ್ಯಕ್ರಮದ ಸಿಂಹಾವಲೋಕನ ಮಾಡಿದ್ದಾರೆ ಮತ್ತು ಒಟ್ಟಾರೆ ಪಯಣದ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ ಹಾಗೂ ಯಾರು ಈ ಶೋ ಗೆದ್ದು ಟ್ರೋಫಿಯನ್ನು ಮನೆಗೊಯ್ಯುತ್ತಾರೆಂದೂ ಊಹಿಸಿದ್ದಾರೆ!

ಸೋಮಣ್ಣ ಅವರು ಸ್ವತಂತ್ರವಾಗಿ ಆಡುತ್ತಿರುವುದರಿಂದ ಮತ್ತು ಉತ್ತಮ ಕೆಲಸ ಮಾಡುತ್ತಿರುವುದರಿಂದ ಅವರ ಗೆಲುವಿಗೆ ಅಪಾರ ಅವಕಾಶವಿದೆ ಎಂದು ಇತ್ತೀಚೆಗೆ ಎಲಿಮಿನೇಟ್ ಆಗಿರುವ ನಟಿ ಮತ್ತು ನಿರ್ಮಾಪಕಿ ಚಿತ್ರಾ ಹಳ್ಳಿಕೇರಿ ಭಾವಿಸುತ್ತಾರೆ.

ಮನೆಯಲ್ಲಿ ಯಾರಿಗೆ ಉತ್ತಮ ತಂತ್ರವಿದೆ ಎಂದು ಕೇಳಿದಾಗ, ಚಿತ್ರಾ ಹೇಳಿದ್ದಿಷ್ಟು: “ನಾವು ತಂತ್ರದ ಬಗ್ಗೆ ಮಾತನಾಡುವಾಗ, ರಾಕೇಶ್ ಅವರು ಇಡೀ ಶೋದಲ್ಲಿ ಸ್ಥಿರವಾಗಿ ಉಳಿದಿದ್ದಾರೆ ಮತ್ತು ನನ್ನ ಪ್ರಕಾರ ಅದೇ ಅವರ ದೊಡ್ಡ ಶಕ್ತಿಯಾಗಿದೆ.”
ತಮ್ಮ ಪ್ರಯಾಣವನ್ನು ನೆನಪಿಸಿಕೊಂಡ ಚೈತ್ರ , “ಬಿಗ್ ಬಾಸ್ OTT ಕನ್ನಡ ಸೀಸನ್ 1 ಜೀವನದ ಪ್ರತಿಯೊಂದು ಹಂತದ ಜನರ ಜೊತೆಗೆ ಬೆರೆಯಲು ಅವಕಾಶ ನೀಡಿದ್ದು, ಅದ್ಭುತ ಅನುಭವವಾಗಿದೆ” ಎಂದರು.

Advertisement. Scroll to continue reading.

ಬಿಗ್ ಬಾಸ್ ಮನೆಯಿಂದ ಹೊರಬಿದ್ದವರಲ್ಲಿ ಮೊದಲಿಗರಾದ ರೂಪದರ್ಶಿ ಮತ್ತು ನಟಿ ಕಿರಣ್ ಯೋಗೇಶ್ವರ್ ಹೇಳಿದರು, “ರಾಕೇಶ್ ಪ್ರಬಲ ಸ್ಪರ್ಧಿಗಳಲ್ಲಿ ಒಬ್ಬರು. ಏಕೆಂದರೆ, ಅವರು ತುಂಬಾ ಸ್ಮಾರ್ಟ್ ಮತ್ತು ತಮ್ಮ ಆಟದಲ್ಲಿ ಚೆನ್ನಾಗಿದ್ದಾರೆ. ಸ್ಪರ್ಧೆಯ ವಿಷಯದಲ್ಲಿ, ತಂತ್ರ ಮತ್ತು ಪ್ರೇಕ್ಷಕರ ಮೇಲೆ ಸಾನಿಯಾ ಉತ್ತಮ ನಾಡಿಮಿಡಿತವನ್ನು ಹೊಂದಿದ್ದಾರೆ” ಎಂದು ಅಭಿಪ್ರಾಯಪಟ್ಟರು.

ಅಕ್ಷತಾ ಕುಕಿ ಪ್ರತಿಕ್ರಿಯಿಸಿದ್ದು ಹೀಗೆ: “ರಾಕೇಶ್ ಅವರು ತುಂಬಾ ಅರ್ಹರು ಮತ್ತು ಆಟಕ್ಕೆ 100% ಕ್ಕಿಂತ ಹೆಚ್ಚು ನೀಡಿರುವುದರಿಂದ ಅವರು ಗೆಲ್ಲುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಪ್ರಕಾರ, ಅವರು ಮನೆಯಲ್ಲಿ ಅತ್ಯಂತ ಅರ್ಹ ಅಭ್ಯರ್ಥಿ.”

BBK OTT ಕನ್ನಡ ಮನೆಯ ನಗುಮುಖದ ಹುಡುಗಿ, ಸ್ಪೂರ್ತಿ ಗೌಡ, “ರೂಪೇಶ್ ಗೆಲ್ಲಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ, ಅವರು ಪ್ರಬಲ ಸ್ಪರ್ಧಿಯಾಗಿದ್ದು, ಒಳ್ಳೆಯ ಮನುಷ್ಯನೂ ಆಗಿದ್ದಾರೆ. ರಾಕೇಶ್ ಅವರು ಟಿ ತಂತ್ರದೊಂದಿಗೆ ತಮ್ಮ ಆಟವನ್ನು ಬಹಳ ಚುರುಕಾಗಿ ಆಡುತ್ತಿರುವುದರಿಂದ ವಿಜೇತರಾಗಬೇಕೆಂದು ನಾನು ಹಾರೈಸುತ್ತೇನೆ” ಎಂದು ಹೇಳಿದರು.

ವಿಜೇತರ ಕುರಿತು ಸ್ಪರ್ಧಿಗಳು ತಮ್ಮ ಭವಿಷ್ಯ ನುಡಿದಿದ್ದಾರೆ. ಬಿಗ್ ಬಾಸ್ OTT ಕನ್ನಡದ ಮೊದಲ ಸೀಸನ್‌ನ ಯಾರು ಗೆಲ್ಲುತ್ತಾರೆಂದು ನೀವು ಭಾವಿಸುತ್ತೀರಿ? ತಿಳಿದುಕೊಳ್ಳಲು @voot ಗೆ ಟ್ಯೂನ್ ಮಾಡಿ!

Advertisement. Scroll to continue reading.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!