Connect with us

Hi, what are you looking for?

ಕರಾವಳಿ

ಉಡುಪಿ : ಅಪಾರ್ಟ್‌ಮೆಂಟ್‌ ಮೇಲಿಂದ ಬಿದ್ದು ಬಾಲಕ ಸಾವು

4

ಉಡುಪಿ: ಬಾಲಕನೊಬ್ಬ ಅಪಾರ್ಟ್‌ಮೆಂಟ್‌ನ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ಇಲ್ಲಿನ ಕನ್ನರ್ಪಾಡಿ ಜಯದುರ್ಗಾ ದೇವಸ್ಥಾನದ ಎದುರು ಸಂಭವಿಸಿದೆ.

ಉದ್ಯಾವರದ ಚರ್ಚ್ ಹಿಂದುಗಡೆ ಟೆಂಟ್‌ನಲ್ಲಿ ವಾಸವಾಗಿರುವ ರೀನಾ ಮಂಡಲ್ ಎಂಬವರ ಮಗ ಅಶಿಕ್(13) ಮೃತ ಬಾಲಕ.

ಆಂಧ್ರ ಮೂಲದ ಈ ಕುಟುಂಬ ಊರೂರು ತಿರುಗಿ ಜೇನು ತೆಗೆಯುವ ಕೆಲಸ ಮಾಡಿಕೊಂಡಿದೆ. ಮೂರು ದಿನದ ಹಿಂದೆಯಷ್ಟೇ ಉಡುಪಿಗೆ ಬಂದು ಉದ್ಯಾವರದ ಚರ್ಚ್ ಹಿಂದುಗಡೆ ಟೆಂಟ್‌ನಲ್ಲಿ ವಾಸವಾಗಿತ್ತು.

Advertisement. Scroll to continue reading.

ಅದೇ ರೀತಿ ಗುರುವಾರವೂ ರೀನಾ ಮಂಡೆಲ್ ಕುಟುಂಬದ ಸದಸ್ಯರು ಕನ್ನರ್ಪಾಡಿ ದೇವಸ್ಥಾನದ ಎದುರಿಗಿರುವ ಅಪಾರ್ಟ್‌ಮೆಂಟ್‌ನ ಮೇಲುಗಡೆ ಇದ್ದ ಜೇನನ್ನು ತೆಗೆಯಲು ಪ್ಲಾಟಿನ ಮಾಲಕರು ತಿಳಿಸಿದ್ದಾರೆ. ಹೀಗಾಗಿ ಆಕಾಶ್ ಮತ್ತು ರೋಶನ್ ಎಂಬವರು ಬೆಳಗ್ಗೆ 9.30ಕ್ಕೆ ಅಪಾರ್ಟ್‌ಮೆಂಟ್ ಮೇಲೆ ಹೋಗಿ ಜೇನು ತೆಗೆಯುತಿದ್ದಾಗ, ಮಹಡಿ ಮೇಲೆ ನಿಂತು ಇದನ್ನು ನೋಡುತಿದ್ದ ಆಶಿಕ್ ಅಕಸ್ಮಿಕವಾಗಿ ಆಯತಪ್ಪಿ ಮಹಡಿ ಮೇಲಿಂದ ಬಿದ್ದಿದ್ದಾನೆ. ಪರಿಣಾಮ ಆತನ ತಲೆ ಮತ್ತು ಎದೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!