Connect with us

Hi, what are you looking for?

ಕರಾವಳಿ

ಬ್ರಹ್ಮಾವರ ತಾಲೂಕು ಮಟ್ಟದ ಎಸ್. ಡಿ. ಎಂ.ಸಿ ಸದಸ್ಯರಿಗೆ ಸಾಮರ್ಥ್ಯವರ್ಧನ ತರಬೇತಿ ಕಾರ್ಯಾಗಾರ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಸರಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲುಗಳು. ಜೀವಿಸುವ ಹಕ್ಕಿನಲ್ಲಿ ಶಿಕ್ಷಣ ಅತೀ ಮುಖ್ಯ ಎಂದು ಪ್ರೊಫೆಸರ್ ಡಾ. ನಿರಂಜನಾರಾಧ್ಯ ಹೇಳಿದರು.


ಶುಕ್ರವಾರ ಬ್ರಹ್ಮಾವರ ಮದರ್ ಪ್ಯಾಲೇಸ್ ಆಡಿಟೋರಿಯಂ ನಲ್ಲಿ ಜರುಗಿದ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಬ್ರಹ್ಮಾವರ ತಾಲೂಕು ಮಟ್ಟದ ಎಸ್. ಡಿ. ಎಂ.ಸಿ ಸದಸ್ಯರಿಗೆ ಸಾಮರ್ಥ್ಯವರ್ಧನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಿಕೊಳ್ಳುವಲ್ಲಿ ಶಿಕ್ಷಣ ಸಚಿವರು ಆಯುಕ್ತರಿಗಿಂತ ಎಸ್. ಡಿ. ಎಂ.ಸಿ ಗಳು ಹೆಚ್ಚು ಪ್ರಭಾವಶಾಲಿಗಳು. ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯೋತ್ಸವದ ಬಳಿಕ ೨ನೇ ಭಾಗ ಎಲ್ಲರಿಗೂ ಸಮಾನ ಶಿಕ್ಷಣವಾಗಿದೆ. ಸರಕಾರಿ ಶಾಲೆಗಳನ್ನು ಕಳೆದು ಕೊಂಡರೆ ಭವಿಷ್ಯ ಮತ್ತು ಭರವಸೆಯನ್ನು ಕಳೆದು ಕೊಂಡಂತೆ ಸರಕಾರಿ ಶಾಲೆಯ ಎಸ್. ಡಿ. ಎಂ.ಸಿ ಅಧ್ಯಕ್ಷರು ಮತ್ತು ಲೋಕಸಭೆಗೆ ಆಯ್ಕೆಯಾಗುವ ಎಂಪಿಗಳಂತೆ ಜನರಿಂದ ಆಯ್ಕೆಗೊಂಡವರಾಗಿರುತ್ತಾರೆ ಎಂದರು.

Advertisement. Scroll to continue reading.

ಈ ಸಂದರ್ಭ ನಿರಂಜನ ಆರಾಧ್ಯರವರನ್ನು ಉಡುಪಿ ಜಿಲ್ಲಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಎಸ್. ಡಿ. ಎಂ.ಸಿ ಸಮನ್ವಯ ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ರಾಜ್ಯ ಅಧ್ಯಕ್ಷ ಮೋಯ್ದಿನ್ ಕುಟ್ಟಿ , ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್ , ಬ್ರಹ್ಮಾವರ ಸ್ಪೋಡ್ಸ್ ಕ್ಲಭ್ ಅಧ್ಯಕ್ಷ ವೈ .ಚಂದ್ರಶೇಖರ ಹೆಗ್ಡೆ ,ಚೇತನ ಪ್ರೌಢ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಭರತ್ ಶೆಟ್ಟಿ , ಎಸ್. ಡಿ. ಎಂ.ಸಿ .ಸಿ ಎಫ್ ಜಿಲ್ಲಾ ಉಪಾಧ್ಯಕ್ಷೆ ಉಷಾ ರಮೇಶ್ , ಕಾರ್ಯದರ್ಶಿ ದೀಪಾ ಮಹೇಶ್ , ಮಾರ್ಗದರ್ಶಕರಾದ ಮಲ್ಲಿಕಾ ಬಿ ಪೂಜಾರಿ, ಬೈಂದೂರು ತಾಲೂಕು ಕಾರ್ಯದರ್ಶಿ ಜ್ಯೋತಿ ಜಯರಾಮ ಶೆಟ್ಟಿ , ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರಮೋದಾ ಕುಶಲ ಶೆಟ್ಟಿ ಉಪಸ್ಥಿತರಿದ್ದರು.

ಬೈಂದೂರು ತಾಲೂಕು ಅಧ್ಯಕ್ಷ ಅವನೀಶ ಹೊಳ್ಳ ಪ್ರಾರ್ಥಿಸಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಸ್ವಾಗತಿಸಿ, ಕುಂದಾಪುರ ತಾಲೂಕು ಅಧ್ಯಕ್ಷ ಎಸ್. ವಿ. ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿಭಾಗೀಯ ಮಟ್ಟದ ಸಮನ್ವಯ ವೇದಿಕೆಯ ಪದಾಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ಜರುಗಿತು.

ಬ್ರಹ್ಮಾವರ ತಾಲೂಕಿನಲ್ಲಿ ೧೧೫ ಸರಕಾರಿ ಶಾಲೆ ಇದ್ದು ೨೦೫೨ ಸದಸ್ಯರು, ಜಿಲ್ಲೆಯಲ್ಲಿ ೧೧ ,೧೬೦ ರಾಜ್ಯದಲ್ಲಿ ಒಟ್ಟು ೮,೪೬,೮೦೦ ಎಸ್ ಡಿ ಎಂ ಸಿ ಸದಸ್ಯರು ಇದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!