Connect with us

Hi, what are you looking for?

ಅಂತಾರಾಷ್ಟ್ರೀಯ

ಶ್ವಾಸಕೋಶದಲ್ಲಿ ಪತ್ತೆಯಾದ 5 ವರ್ಷಗಳ ಹಿಂದೆ ಕಳೆದುಕೊಂಡಿದ್ದ ಮೂಗುತಿ!

2

ಅಂತಾರಾಷ್ಟ್ರೀಯ ಸುದ್ದಿ : ಯುಎಸ್‌ನಲ್ಲಿ ವ್ಯಕ್ತಿಯೊಬ್ಬರು ಐದು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಮೂಗಿಗೆ ಹಾಕಿದ್ದ ಉಂಗುರ ಪತ್ತೆಯಾಗಿದೆ. ಈ ಸುದ್ದಿಯಲ್ಲಿ ಅಂತದ್ದೇನಿದೆ ಅಂದುಕೊಂಡ್ರೆ, ನಿಮಗೆ ಆ ಉಂಗುರ ಸಿಕ್ಕಿದ್ದು, ಎಲ್ಲಿ ಎಂದು ಗೊತ್ತಾದಲ್ಲಿ ಆಶ್ಚರ್ಯವಾಗದೆ ಇರದು.

ಸುಮಾರು 35 ವರ್ಷದ ಜೋಯ್ ಲಿಕಿನ್ಸ್ ಎಂಬುವವರು ಫ್ಯಾಷನ್ ಗಾಗಿ ಮೂಗಿಗೆ ಉಂಗುರವನ್ನು ಹಾಕಿಸಿಕೊಂಡಿದ್ದರು. ಕಳೆದ 5 ವರ್ಷಗಳ ಹಿಂದೆ ಅದು ಕಳೆದು ಹೋಗಿತ್ತು. ಎಲ್ಲೋ ಮಲಗಿರುವಾಗ ಉಂಗುರ ಬಿದ್ದು ಹೋಗಿದೆ ಎಂದುಕೊಂಡಿದ್ದರು.

ಆದರೆ ಒಂದು ರಾತ್ರಿ, ಕೆಮ್ಮುತ್ತಾ ಎಚ್ಚರಗೊಂಡರು. ಆ ದಿನ ತುಂಬಾ ಕೆಮ್ಮುತ್ತಿದ್ದರು. ಇದರ ಜೊತೆಗೆ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಉಸಿರಾಡಲು ತೊಂದರೆ ಅನುಭವಿಸಿದ್ದಾರೆ. ತಕ್ಷಣ ಅವರು ಆಸ್ಪತ್ರೆಗೆ ಹೋದರು.

Advertisement. Scroll to continue reading.

ಅಲ್ಲಿ ಪರಿಶೀಲಿಸಿದ ವೈದ್ಯರು, ಆರಂಭದಲ್ಲಿ ಇವು ನ್ಯುಮೋನಿಯಾದ ಎಚ್ಚರಿಕೆ ಚಿಹ್ನೆಗಳು ಎಂದು ಭಾವಿಸಿದ್ದರು. ಆಮೇಲೆ ಎಕ್ಸ್-ರೇ ಮಾಡಲಾಯಿತು. ಎಕ್ಸ್-ರೇ ನೋಡಿ ಅವರಿಗೆ ಶಾಕ್ ಕಾದಿತ್ತು. ಹೌದು, ಅವರ ಶ್ವಾಸಕೋಶದ ಮೇಲಿನ ಎಡ ಹಾಲೆಯೊಳಗೆ 0.6 ಇಂಚಿನ ಉಂಗುರ ಹುದುಗಿತ್ತು. ಅದು ಅವರು ಕಳೆದುಕೊಂಡಿದ್ದ ಮೂಗಿನ ಉಂಗುರ.

ಈ ಕುರಿತಂತೆ ಜೋಯ್ ಲಿಕಿನ್ಸ್ ಅವರು ಇಸ್ಟಾಗ್ರಾಮ್‌ನಲ್ಲಿ ಶ್ವಾಸಕೋಶದಲ್ಲಿ ಮೂಗಿನ ಉಂಗುರವಿರುವ ಎಕ್ಸ್-ರೇ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅದರ ಹಿಂದಿನ ಕಥೆಯನ್ನು ಹಂಚಿಕೊಂಡಿದ್ದಾರೆ.

ನಾನು ಅದನ್ನು ಸ್ಮರಣಿಕೆಯಾಗಿ ಇಟ್ಟುಕೊಂಡಿದ್ದೇನೆ, ನಾನು ಅದನ್ನು ಮತ್ತೆ ಧರಿಸುವುದಿಲ್ಲ ಎಂದು ಬರೆದಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!