Connect with us

Hi, what are you looking for?

ಕ್ರೀಡೆ

ವೃತ್ತಿ ಬದುಕಿಗೆ ವಿದಾಯ ಹೇಳಿದ ಫೆಡರರ್…ಗೆಳೆಯನೊಂದಿಗೆ ತಾನೂ ಕಣ್ಣೀರಾದ ನಡಾಲ್…ಕ್ರೀಡೆಯ ಸೊಗಸು ಎಂದ ಕೊಹ್ಲಿ

1

ಕ್ರೀಡೆ : 24 ವರ್ಷಗಳಿಂದ ಟೆನಿಸ್ ಅಂಗಳದ ರಾಜನಾಗಿ ಮೆರೆದಿದ್ದ ರೋಜರ್ ಫೆಡರರ್ ಇಂದಿಗೆ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಲೆವರ್ ಕಪ್‌ನಲ್ಲಿ ಎದುರಾಳಿ ರಾಫೆಲ್ ನಡಾಲ್ ವಿರುದ್ಧ ಸೋಲುವ ಮೂಲಕ ಅವರು ತಮ್ಮ ಕೊನೆಯ ಆಟ ಮುಗಿಸಿದರು.

ವಿದಾಯ ಭಾಷಣ ಮಾಡಿದ ರೋಜರ್ ತನ್ನ ವೃತ್ತಿ ಬದುಕಿನಲ್ಲಿ ಬಂದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಈ ವೇಳೆ ಉಮ್ಮಳಿಸಿ ಬಂದ ದುಃಖದಿಂದ ಅವರು ಕಣ್ಣೀರಾದರು. ಈ ವೇಳೆ ಸಹ ಆಟಗಾರ ರಾಫೆಲ್ ನಡಾಲ್ ಕೂಡ ಬಿಕ್ಕಳಿಸಿ ಅತ್ತು ಬಿಟ್ಟರು.

ಪಂದ್ಯದ ವೇಳೆ ಮೈದಾನದಲ್ಲಿ ಮದಗಜಗಳಂತೆ ಕಾದಾಡುವ ಇಬ್ಬರು ಶ್ರೇಷ್ಠ ಟೆನಿಸ್ ಪಟುಗಳು ಮಗುವಿನಂತೆ ಕಣ್ಣೀರಿಟ್ಟಿದ್ದಾರೆ. ಆ ಕ್ಷಣದ ಫೋಟೋವನ್ನು ವಿರಾಟ್ ಕೊಹ್ಲಿ ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.

Advertisement. Scroll to continue reading.

ಇಬ್ಬರು ಎದುರಾಳಿಗಳು ಎಂದಾದರೂ ಈ ರೀತಿಯ ಭಾವನಾತ್ಮಕ ಕ್ಷಣಗಳನ್ನು ಹಂಚಿಕೊಳ್ಳುತ್ತಾರೆಂದು ಯಾರಾದರೂ ಯೋಚಿಸಿದ್ದೀರಾ? ಕ್ರೀಡೆಯ ಸೊಗಸೆಂದರೆ ಇದಲ್ಲವೆ? ಇದು ನನ್ನ ಪಾಲಿಗೆ ಕ್ರೀಡೆಯಲ್ಲಿನ ಅದ್ಭುತ ಕ್ಷಣವಾಗಿದೆ. ಸಹ ಆಟಗಾರ ನಮಗಾಗಿ ಕಣ್ಣೀರಿಡುವುದಕ್ಕಿಂತ ದೊಡ್ಡ ಗೌರವ ಇನ್ನೊಂದಿಲ್ಲ. ದೇವರು ನಿಮಗೆ ನೀಡಿದ ಪ್ರತಿಭೆಯನ್ನು ಬಳಸಿಕೊಂಡಿದ್ದೇ ಇದಕ್ಕೆ ಕಾರಣ. ಇಬ್ಬರು ದಿಗ್ಗಜರ ಬಗ್ಗೆ ಗೌರವವಿರಲಿ ಎಂದು ಬರೆದುಕೊಂಡಿದ್ದಾರೆ.

Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!