ನವದೆಹಲಿ : ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇಸ್ರೇಲ್ ತೊರೆಯಲು ಬಯಸಿದ್ದ ಇಬ್ಬರು ನೇಪಾಳದ ನಾಗರಿಕರು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಮಂದಿ ಭಾರತೀಯರನ್ನು ಹೊತ್ತ ವಿಶೇಷ ವಿಮಾನವು ಭಾನುವಾರ ದೆಹಲಿಗೆ ಬಂದಿಳಿದಿದೆ.
ಗಾಜಾದಿಂದ ಇಸ್ರೇಲ್ ಪಟ್ಟಣಗಳ ಮೇಲೆ ಹಮಾಸ್ ಬಂಡುಕೋರರು ನಡೆಸಿದ ದಾಳಿಯ ನಂತರ ಸ್ವದೇಶಕ್ಕೆ ಮರಳಲು ಬಯಸುವ ಭಾರತೀಯರಿಗೆ ಅಕ್ಟೋಬರ್ 12ರಂದು ಪ್ರಾರಂಭಿಸಲಾದ ಆಪರೇಷನ್ ಅಜಯ್‌ನ ಭಾಗವಾಗಿ ಇದು ಆರನೇ ವಿಮಾನ ಭಾರತಕ್ಕೆ ಯಶಸ್ವಿಯಾಗಿ ಆಗಮಿಸಿದೆ.
ಈ ವಿಮಾನದಲ್ಲಿ ಇಬ್ಬರು ನೇಪಾಳದ ನಾಗರಿಕರು ಮತ್ತು ನಾಲ್ಕು ಶಿಶುಗಳು ಸೇರಿದಂತೆ 143 ಮಂದಿ ಭಾರತಕ್ಕೆ ಬಂದಿದ್ದಾರೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.

‘ಆಪರೇಷನ್ ಅಜಯ್ ಮುಂದುವರಿಯುತ್ತದೆ. ಆರನೇ ವಿಮಾನವು ಟೆಲ್ ಅವೀವ್‌ನಿಂದ ದೆಹಲಿಗೆ ಹೊರಟಿದೆ. ರಾಯಭಾರ ಕಚೇರಿಯು ಎಲ್ಲರಿಗೂ ಸುರಕ್ಷಿತ ಪ್ರಯಾಣವನ್ನು ಬಯಸುತ್ತದೆ’ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ಟ್ವೀಟ್ ಮಾಡಿದೆ.
ಕಳೆದ ಮಂಗಳವಾರ ಇಸ್ರೇಲ್‌ನಿಂದ ಬಂದಿದ್ದ ವಿಶೇಷ ವಿಮಾನದಲ್ಲಿ ಹದಿನೆಂಟು ನೇಪಾಳ ಪ್ರಜೆಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
6th #OperationAjay flight lands in New Delhi.
143 passengers including 2 Nepalese citizens arrived onboard the flight.
Welcomed by MoS @SteelMinIndia & @MoRD_GoI @fskulaste at the airport. pic.twitter.com/x5Ejj8mDqa— Arindam Bagchi (@MEAIndia) October 22, 2023
