Connect with us

Hi, what are you looking for?

ಕರಾವಳಿ

ಯಾವೂದೇ ಗಂಡು ಕರು ಮತ್ತು ಗೊಡ್ಡು ದನ ಅನಾಥವಲ್ಲ ನಾಥರಿದ್ದಾರೆ ಇಲ್ಲಿ

2

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಅನಾಥ ಗೋವುಗಳ ಸಂರಕ್ಷಣೆಯ ಕೇಂದ್ರವಾಗಿದೆ ಬ್ರಹ್ಮಾವರ ತಾಲೂಕು ನಂಚಾರು ಎನ್ನುವ ಗ್ರಾಮೀಣ ಭಾಗದಲ್ಲಿದೆ ಕಾಮದೇನು ಗೋಶಾಲಾ.

ಇಲ್ಲಿನ ರಾಜೇಂದ್ರ ಚಕ್ಕೇರಾ ಮತ್ತು ಲಲಿತಾ ಚಕ್ಕೆರಾ ದಂಪತಿಗಳಿಗೆ ಮಕ್ಕಳು ಇಲ್ಲ ಎನ್ನುವ ಕೊರಗಿಗೆ ಅವರು ಕಂಡುಕೊಂಡದ್ದು ಗೋ ಸಂತತಿಯ ರಕ್ಷಣೆ.

Advertisement. Scroll to continue reading.

ಮನೆಯಲ್ಲಿ 20 ಗೋವನ್ನು ಸಾಕಿ ಉತ್ತಮ ಹೈನುಗಾರ ಎನ್ನುವ ಪ್ರಶಸ್ತಿಗೆ ಭಾಜನರಾದ ಗೋಪ್ರೇಮಿ ಈ ದಂಪತಿ.

ಎಲ್ಲೆಲ್ಲೂ ಗೋ ಸಾಗಾಟ , ಕಟುಕರ ಕೈಗೆ ಸಿಕ್ಕಿ ವಧೆಯಿಂದ ಹಿಂಸೆ ಅನುಭವಿಸುವ ಗೋವುಗಳ ಆಕ್ರಂದನ ಇವರಿಗೆ ಗೋ ರಕ್ಷಣೆ ಮಾಡಲು ಸ್ಪೂರ್ತಿಯಂತೆ.
8 ತಿಂಗಳ ಹಿಂದೆ ಇವರದೇ 6 ಎಕ್ರೆ ಜಾಗದಲ್ಲಿ ಗೋವುಗಳನ್ನು ರಕ್ಷಣೆ ಮಾಡಲು ಶೆಡ್ ಮಾಡಿದ್ದಾರೆ. ಗೋವುಗಳಿಗೆ ಕುಡಿಯಲು ಸಾಕಷ್ಟು ನೀರು ಇದೆ. ದೇಶಿ ಮತ್ತು ವಿದೇಶಿ ತಳಿಗಳ 100 ರಷ್ಟು ಗೋವು ಈಗ ಇಲ್ಲಿದೆ.

ಪೂರ್ವಿಕರ ಇವರದೇ ಜಾಗದಲ್ಲಿ ಬೆಳೆದ ಹಸಿ ಹುಲ್ಲು ಮತ್ತು ಖರೀದಿಸುವ ಒಣ ಹುಲ್ಲು ಮತ್ತು ಕೆಲಸಗಾರರ ಖರ್ಚುಪ್ರತೀ ದಿನಕ್ಕೆ 6,000 ರೂ ಬೇಕಾಗುತ್ತದೆ .
ಗೊಬ್ಬರಕ್ಕೆ ಮತ್ತು ಗೋಬರ್ ಗ್ಯಾಸಿಗೆ ಗೋವಿನ ಸಗಣಿ ಹೊರತಾಗಿ ಬೇರೇ ಎನೂ ಲಾಭ ಇಲ್ಲ .
ಗೋವನ್ನು ಸಾಕಲು ಅಸಾದ್ಯವಾದವರು ಅವರೇ ತಂದು ನೀಡಿದಲ್ಲಿ ಇಲ್ಲಿ ಅನಾಥವಾಗಿರದೆ ಬದುಕುವಷ್ಟು ಕಾಲ ರಕ್ಷಣೆ ಪಡೆಯಲಿದೆ ಗೋ ಸಂತತಿ.
ಇವರ ಗೋ ರಕ್ಷಣಾ ಸೇವಾ ಕಾರ್ಯಕ್ಕೆ ಸಾರ್ವಜನಿಕರು ಗೋ ಪ್ರೇಮಿಗಳು ಸ್ಪಂದಿಸ ಬೇಕಾಗಿದೆ
ಸಂಪರ್ಕ ಸಂಖ್ಯೆ :9481823469

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!