Connect with us

Hi, what are you looking for?

ಕರಾವಳಿ

ನೆಹರು ಕಾರು ಚಾಲಕರಾಗಿದ್ದ, ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಮೋನಪ್ಪ ಗೌಡ ನಿಧನ

1

ಸುಳ್ಯ : ಮಾಜಿ ಪ್ರಧಾನಿ ದಿ.ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಕಾರು ಚಾಲಕರಾಗಿದ್ದ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಸುಳ್ಯದ ಕನಕಮಜಲು ಗ್ರಾಮದ ಮೋನಪ್ಪ ಗೌಡ ಕೊರಂಬಡ್ಕ ಅವರು ಬುಧವಾರ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅವರಿಗೆ 102 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ನಿಧನರಾದರು.

ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರೂ ಅವರೊಂದಿಗೆ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗುರುತಿಸಿಕೊಂಡಿದ್ದ ಮೋನಪ್ಪ ಗೌಡ ಅವರು, ನೆಹರೂ ಅವರ ಕಾರು ಚಾಲಕರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು.

Advertisement. Scroll to continue reading.

ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಹಿರಿಯರಾಗಿದ್ದ ಮೋನಪ್ಪ ಗೌಡ ಅವರು ಪುತ್ರ ವೆಂಕಟ್ರಮಣ ಕೊರಂಬಡ್ಕ, ಪುತ್ರಿಯರಾದ ಕಮಲ, ವಿಮಲ, ಕುಸುಮ ಅವರನ್ನು ಅಗಲಿದ್ದಾರೆ.

ಮೋನಪ್ಪ ಗೌಡ ಅವರು ಶಿವರಾಮ ಕಾರಂತರು, ಶ್ರೀನಿವಾಸ ಮಲ್ಯ, ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರಿಗೂ ಚಾಲಕರಾಗಿ ಸೇವೆ ಸಲ್ಲಿಸಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

You May Also Like

ಕರಾವಳಿ

1 ಉಡುಪಿ : 14 ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ತಂದೆ – ಮಗನನ್ನು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಶಿವಶಂಕರ್(58) ಮತ್ತು ಆತನ ಮಗ ಸಚಿನ್(28)...

Uncategorized

1 ಉಡುಪಿ : ಜಿಲ್ಲೆಯ ಹಲವು ಶಾಲೆಗಳಲ್ಲಿ ಮತಗಟ್ಟೆಗಳು ಇದ್ದವು. ಮತದಾರರು ಮತ ಚಲಾಯಿಸಿದ್ದರು. ಆದರೆ, ಈ ಶಾಲೆಯ ಸೊಬಗ ಕಂಡು ಬೆರಗಾದವರೇ ಹೆಚ್ಚು. ಹೌದು, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡಕದಲ್ಲಿ ಬೊಮ್ಮಾರಬೆಟ್ಟು...

Uncategorized

1 ಕೋಟ: ಕಳೆದ ವಾರ ಸಾಲಿಗ್ರಾಮ ದೇವಳದ ಅನ್ನದಾನಕ್ಕೆ ಭಿಕ್ಷಾಟನೆ ಮಾಡಿ ಸಂಗ್ರಹಿಸಿದ್ದ 1ಲಕ್ಷ ರೂ ನೀಡಿದ ಅಜ್ಜಿ ಮಂಗಳವಾರ ಶ್ರೀ ಗುರುನರಸಿಂಹನ ಸನ್ನಿಧಿಯಲ್ಲಿ ಪೊಳಲಿಯ ನಾಗೇಶ ಗುರುಸ್ವಾಮಿ ನೇತೃತ್ವದಲ್ಲಿ ಇರುಮುಡಿ ಕಟ್ಟಿ...

Uncategorized

1 ಬ್ರಹ್ಮಾವರ : ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನದಂತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ಕೋವಿಡ್ 19 ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಟಾಸ್ಕ್ ಪೋರ್ಸ್ ಸದಸ್ಯರೊಂದಿಗೆ ಪೊಲೀಸ್ ವಾಹನದೊಂದಿಗೆ ನೆರವಿಗೆ ಸ್ಪಂದಿಸಲಿದ್ದೇವೆ.ಸಾರ್ವಜನಿಕರಿಗೆ...

error: Content is protected !!